
ವಿಜಯಪುರ (ಸೆ.13): ಸಾಲಾಗಾರರ ಕಾಟ ನೀಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವ ಪತ್ನಿಯನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದಿದೆ.
ಸುರೇಶ ಸಂಗಪ್ಪ ಸಜ್ಜನ(42) ಹಾಗೂ ರತ್ನಾ ಸುರೇಶ ಸಜ್ಜನ (33) ಮೃತರು. ಸಾಲಗಾರರ ಕಿರಿಕಿರಿಯಿಂದ ಪತಿ-ಪತ್ನಿ ನಡುವೆ ನಡೆದ ವಾಗ್ವಾದ ಏರ್ಪಟ್ಟಿತ್ತು. ರತ್ನಾ ಸಾಲಗಾರರು ನೀಡುವ ಕಿರುಕುಳದಿಂದ ಬೇಸತ್ತಿದ್ದಳು. ಅಷ್ಟೇ ಅಲ್ಲ, ಈ ಬಗ್ಗೆ ಪತಿಯನ್ನು ಪ್ರಶ್ನೆ ಮಾಡಿದ್ದಳು.
ಈ ವಿಚಾರವಾಗಿ ಸುರೇಶ ಹೆಂಡತಿ ಜೊತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ರತ್ನಾ ಕೂಡ ಮಾತು ಬೆಳೆಸಿದ್ದಾಳೆ. ಕೋಪಗೊಂಡ ಸುರೇಶ ಕಬ್ಬಿಣದ ರಾಡ್ ನಿಂದ ಹೆಂಡತಿ ತಲೆಗೆ ಹೊಡೆದಿದ್ದಾನೆ. ಆತ ಹೊಡೆದ ಏಟಿಗೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪೊಲೀಸರು ಬಂಧಿಸಿದರೆ ಎನ್ನುವ ಭಯದಲ್ಲಿ ಆತ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Comments are closed.