
ಬಿಎಸ್ವೈ ಸಂಪುಟ ವಿಸ್ತರಣೆಯಾಗಿ ತಿಂಗಳು ಕಳೆದಿದ್ದರೂ ಸಚಿವರುಗಳಲ್ಲಿರೋ ಅಸಮಧಾನ ಮಾತ್ರ ಪೂರ್ತಿ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಇಂದೂ ಕೂಡ ಸಚಿವರು ಒಳಗೊಳಗೆ ಅಸಮಾಧಾನ ಪಡುತ್ತಿದ್ದಾರೆ. ಇದಕ್ಕೆ ಸಚಿವ ಆರ್.ಅಶೋಕ್ ಕೂಡ ಹೊರತಲ್ಲ. ಹೌದು ಬೆಂಗಳೂರು ಉಸ್ತುವಾರಿ ಕೈ ತಪ್ಪುತ್ತಿರೋ ಅಸಮಧಾನವನ್ನು ಆರ್.ಅಶೋಕ್ ಹಾಡಿನ ಮೂಲಕ ಹೊರಹಾಕಿದ್ದಾರೆ.
ಹೌದು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಿದ್ದ ವೇಳೆ ಆರ್.ಅಶೋಕ್ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಶಾಸಕ ನಿರಂಜನ ಜೊತೆ ತಮಾಷೆಯಾಗಿ ಮಾತನಾಡುತ್ತಿದ್ದ ಆರ್.ಅಶೋಕ್, ಮಾಧ್ಯಮಗಳ ಕ್ಯಾಮರಾ ಎದುರೇ ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಎಂದು ಅತೃಪ್ತಿಯನ್ನು ಹಾಡಿನ ಮೂಲಕ ತೋಡಿಕೊಂಡಿದ್ದಾರೆ.
ಬೆಂಗಳೂರು ಉಸ್ತುವಾರಿ ಕೈತಪ್ಪೋ ಆತಂಕದಲ್ಲಿರೋ ಸಚಿವ ಆರ್.ಅಶೋಕ್ ತಮ್ಮ ಅಸಮಧಾನವನ್ನೆಲ್ಲ ದೊಡ್ಡವರೆಲ್ಲ ಜಾಣರಲ್ಲ…ಚಿಕ್ಕವರೆಲ್ಲ ಕೋಣರಲ್ಲ ಎಂಬ ಹಾಡಿನ ಮೂಲಕ ಹೊರಹಾಕಿದ್ದಾರೆ.
ಇದೀಗ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು, ಬಿಎಸ್ವೈ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರೋದು ಹಾಗೂ ಬೆಂಗಳೂರು ಉಸ್ತುವಾರಿ ಕೈ ತಪ್ಪುತ್ತಿರೋದಿಕ್ಕೆ ಆರ್.ಅಶೋಕ್ ಈ ರೀತಿ ತಮ್ಮ ನೋವು ತೋಡಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
Comments are closed.