ಕರ್ನಾಟಕ

ಬೆಂಗಳೂರಿನಲ್ಲಿ ಕೇವಲ 5 ದಿನದಲ್ಲಿ ವಾಹನ ಸವಾರರಿಂದ ಮಾಡಿದ ದಂಡ ವಸೂಲಿ ಎಷ್ಟು ಗೊತ್ತೇ…?

Pinterest LinkedIn Tumblr

ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಐದು ದಿನಗಳಲ್ಲೇ ಬೆಂಗಳೂರು ನಗರ ಸಂಚಾರಿ ಪೊಲೀಸರು ವಾಹನ ಸವಾರರಿಂದ ದಾಖಲೆ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯ ನಿರ್ದೇಶನದಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಸೆ.4 ರಿಂದ 9 (ಸೋಮವಾರ) ಬೆಳಗ್ಗೆ 10 ಗಂಟೆಯವರೆಗೆ ಒಟ್ಟು 6,813 ಪ್ರಕರಣ ದಾಖಲಿಸಿ 72,49,900 ದಂಡ ವಸೂಲಿ ಮಾಡಿದ್ದಾರೆ.

ಹಿಂಬದಿಯ ಸವಾರ ಹೆಲ್ಮಟ್ ಧರಿಸದ 2,645 ಪ್ರಕರಣಗಳು ದಾಖಲಾಗಿದ್ದು, ಸುಮಾರು 26,45,000 ದಂಡ ವಸೂಲಿ ಮಾಡಲಾಗಿದೆ. ಅಲ್ಲದೇ, ಹೆಲ್ಮಟ್ ಧರಿಸದೇ ವಾಹನ ಚಾಲನೆ ಮಾಡಿದ 1,968 ಪ್ರಕರಣಗಳು ದಾಖಲಾಗಿದ್ದು 19. 68 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ.

Comments are closed.