
ಸಿಲಿಕಾನ್ ಸಿಟಿಯ ಗಲ್ಲಿ-ಗಲ್ಲಿಗಳಿಂದ ಹಿಡಿದು ಐಷಾರಾಮಿ ಏರಿಯಾ ಎಂ.ಜಿ.ರಸ್ತೆಯವರೆಗೂ ನೂರಾರು ಅಕ್ರಮ ಪಬ್,ಬಾರ್ ಹಾಗೂ ಡ್ಯಾನ್ಸ್ ಕ್ಲಬ್ಗಳಿವೆ. ಆದರೆ ಕಳೆದ ಒಂದು ತಿಂಗಳಿನಿಂದ ಈ ಅಕ್ರಮಕೋರರ ಎದೆಯಲ್ಲಿ ಸಿಸಿಬಿ ನಡುಕ ಮೂಡಿಸಿದೆ. ಮೇಲಿಂದ ಮೇಲೆ ರೇಡ್ ನಡೆಸುವ ಮೂಲಕ ಸಿಸಿಬಿ ಈ ದೋ ನಂಬರ್ ದಂಧೇಕೋರರಿಗೆ ಶಾಕ್ ನೀಡಿದೆ.
ಹೌದು ನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪಣತೊಟ್ಟಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಕಳೆದ ಒಂದು ತಿಂಗಳಿನಿಂದ ಒಂದರ ಮೇಲೊಂದರಂತೆ ದಾಳಿ ಸಂಘಟಿಸಿದ್ದು, 30 ದಿನಗಳಲ್ಲಿ ಬರೋಬ್ಬರಿ 29 ರೇಡ್ ನಡೆಸಿ ಅಕ್ರಮ ಬಾರ್ ನಡೆಸುತ್ತಿದ್ದವರಿಗೆ, ಡ್ರಗ್ಸ್ ಮಾರಾಟಗಾರರಿಗೆ ಕಡಿವಾಣ ಹಾಕಿದ್ದಾರೆ.
ಸಿಸಿಬಿ ಜಂಟಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ನಗರದಲ್ಲಿ ಪರ್ಮಿಶನ್ ಇಲ್ಲದೇ ಹಾಗೂ ಲೈಸೆನ್ಸ್ ನವೀಕರಿಸಿಕೊಳ್ಳದೇ ಬಾರ್, ಪಬ್,ರೆಸ್ಟೋರೆಂಟ್,ಡ್ಯಾನ್ಸ್ ಬಾರ್, ಹುಕ್ಕಾ ಅಡ್ಡೆ ನಡೆಸುತ್ತಿದ್ದವರ ಮೇಲೆ ಸಮರ ಸಾರಿದ ಸಂದೀಪ್ ಪಾಟೀಲ್. ಅಂದಾಜು 150ಕ್ಕೂ ಹೆಚ್ಚು ಜನರಿಗೆ ಮಾಲೀಕರಿಗೆ ನೊಟೀಸ್ ಕೂಡ ನೀಡಿದ್ದರು.
ಅಲ್ಲದೇ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ಲಿ ಮೇರಿಡಿಯನ್, ಬ್ಲೂ ಎವೆನ್ ಸೇರಿದಂತೆ ನಗರದ ಹಲವು ಪ್ರತಿಷ್ಠಿತ ಹೋಟೆಲ್ಗಳ ಮೇಲೆ ಸಿಸಿಬಿ ರೇಡ್ ನಡೆಸಿ ದಂಧೆಕೋರರಿಗೆ ಚುರುಕು ಮುಟ್ಟಿಸಿದ್ದಾರೆ. ಕೆಲವೆಡೆಯಂತೂ ಪೊಲೀಸ್ ಠಾಣೆ ಪಕ್ಕದಲ್ಲೇ ನಡೆಯುತ್ತಿದ್ದ ಅಕ್ರಮ ದಂಧೆಗಳು ಕೂಡ ಸಿಸಿಬಿ ದಾಳಿ ವೇಳೆ ಬಯಲಾಗಿದೆ.
Comments are closed.