
ಸ್ಯಾಂಡಲ್ ವುಡ್ ನ ಗಾಯಕ ನವೀನ್ ಸಜ್ಜು ತಮ್ಮ ಹಾಡಿನ ಕಾರಣವೊಂದಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಇತ್ತೀಚಿಗಷ್ಟೇ ಏನ್ ಚಂದನೋ ತಕ್ಕೋ ಅನ್ನೋ ಹಾಡಿನ ಮೂಲಕ ಫುಲ್ ಪಬ್ಲಿಸಿಟಿ ಗಳಿಸಿದ್ದ ನವೀನ್ ಸಜ್ಜು, ಇದೀಗ ಇದೇ ಹಾಡಿನ ಕಾರಣಕ್ಕೆ ನವೀನ್ ವಿವಾದಕ್ಕೊಳಗಾಗಿದ್ದು, ಹೆಣ್ಣುಮಕ್ಕಳನ್ನು ಅವಮಾನಿಸಿದ ಆರೋಪಕ್ಕೆ ತುತ್ತಾಗಿದ್ದಾರೆ.
ಹೌದು ಬಡ್ಡಿ ಮಗಂದ್ ಲೈಫ್ ಚಿತ್ರದ ಏನ್ ಚಂದನೋ ತಕ್ಕೋ ಅನ್ನೋ ಹಾಡಿನ ಸಾಹಿತ್ಯಕ್ಕೆ ವಿರೋಧ ವ್ಯಕ್ತವಾಗಿದೆ. ನವೀನ್ ಸಜ್ಜು ಹಾಡಿರೋ ಈ ಹಾಡು ಈಗಾಗಲೇ 10 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.ಆದರೆ ಈ ಹಾಡಿನಲ್ಲಿ ಒಕ್ಕಲಿಗ ಸಮುದಾಯದ ಹೆಣ್ಣುಮಕ್ಕಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.
ಈ ಹಾಡಿಗೆ ವಿರೋಧ ವ್ಯಕ್ತಪಡಿಸಿರುವ ಒಕ್ಕಲಿಗ ಸಮುದಾಯದ ರಾಜ್ಯಾಧ್ಯಕ್ಷೆ ಹೇಮಾ ರಾಜೇಶ್ ಗೌಡ ಈ ಬಗ್ಗೆ ಫಿಲಂ ಚೇಂಬರ್ ಕಾರ್ಯದರ್ಶಿ ಎನ್.ಎಂ.ಸುರೇಶ್ಗೆ ದೂರು ನೀಡಿದ್ದು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಗೌರವ ಕಾರ್ಯದರ್ಶಿ ಭಾ.ಮ. ಹರೀಶ್ ಚಿತ್ರತಂಡ ಒಕ್ಕಲಿಗ ಸಮುದಾಯದ ಕ್ಷಮೆ ಕೋರಬೇಕು. ಕಲಾ ಜಗತ್ತಿನಲ್ಲಿ ಯಾವುದೇ ಧರ್ಮ, ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ನವೀನ್ ಸಜ್ಜು, ‘ನಾನು ಗಾಯಕ. ನೀಡಿದ ಸಾಹಿತ್ಯವನ್ನು ಹಾಡಿದ್ದೇನೆ.ಸಾಂಗ್ ಮೂಲಕ ಹೆಣ್ಣುಮಕ್ಕಳ ತೇಜೋವಧೆ ಮಾಡಿಲ್ಲ’ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯಿಸುತ್ತೆ. ಹಾಡಿನ ಸಾಲುಗಳನ್ನು ಕೈಬಿಡುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
Comments are closed.