ಕರ್ನಾಟಕ

ಟೊಮೇಟೊ ದರ ಭಾರೀ ಕುಸಿತ, ಸಂಕಷ್ಟದಲ್ಲಿ ರೈತ!

Pinterest LinkedIn Tumblr


ಕೋಲಾರ : ಕೆಂಪು ಹಣ್ಣು ಟೊಮೇಟೊ ಬೆಲೆ ಇತ್ತಿಚೆಗೆ ದಿನೇದಿನೇ ಕುಸಿತ ಕಾಣುತ್ತಿದ್ದು, ಟೊಮೇಟೊ ಬೆಳೆದ ಬೆಳೆಗಾರರಂತು ದಿಕ್ಕೇ ತೋಚದಂತೆ ಅಯೋಮಯ ಸ್ತಿತಿಯಲ್ಲಿದ್ದಾರೆ, ಸತತ ಬರಗಾಲದಲ್ಲೂ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದ ರೈತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ .

ಕೋಲಾರದ ಟೊಮೇಟೊ ಮಾರುಕಟ್ಟೆ ಏಷ್ಯಾದಲ್ಲಿಯೇ 2 ನೇ ಅತಿ ದೊಡ್ಡ ಮಾರುಕಟ್ಟೆ, ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ನಿತ್ಯ ಸಾವಿರಾರು ಕ್ವಿಂಟಾಲ್ ಟೊಮೇಟೊ ಇಲ್ಲಿಗೆ ಬರುತ್ತೆ, ನಮ್ಮ ರಾಜ್ಯದಿಂಲೇ ಅಲ್ಲದೆ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಟೊಮೇಟೊ ಆವಕವಿದೆ, ಆದರೆ ಕೆಲವು ದಿನದಿಂದ ಬೆಲೆ ಕುಸಿತ ಕಾಣುತ್ತಿದ್ದು ಈ ತ್ರೈಮಾಸಿಕದಲ್ಲಿ ಕೋಲಾರ ಎಪಿಎಮ್ ಸಿ ಯಿಂದ ಅತಿ ಹೆಚ್ಚು ಟೊಮೇಟೊ ವಿದೇಶಗಳೂ ಸೇರಿದಂತೆ ದೇಶದ ವಿವಿಧ ಕಡೆ ರಪ್ತಾಗುತ್ತಿದ್ದು ದರ ಸಹ ತುಸು ಹೆಚ್ಚಾಗಿರುತ್ತಿತ್ತು ಅದ್ದರಿಂದಲೇ ರೈತರೂ ಸಹ ಈ ತ್ರೈಮಾಸಿಕದಲ್ಲಿ ಅತೀ ಹೆಚ್ಚು ಬಂಡವಾಳ ಹೂಡಿ ಬೆಳೆ ಬೆಳೆಯುವ ಕರಣ ಮಾರುಕಟ್ಟೆಗೆ ಆವಕ ಸಹ ಹೆಚ್ಚಾಗಿರುತ್ತದೆ ಆದರೆ ಸದ್ಯ ಟೊಮೇಟೊಗೆ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ.

ಮಾರುಕಟ್ಟೆಯಲ್ಲಿ ಇಂದು ಸಹ ಒಂದು ಕೆ. ಜಿಗೆ 3 ರಿಂದ 5 ರೂ ನಿಗದಿಯಾಗಿದೆ, ಆದರೆ ಮಾರುಕಟ್ಟೆಯಲ್ಲಿ ಕೊಳ್ಳುವ ವ್ಯಾಪಾರಿಗಳು ಹೊರಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದಾರೆ, ಹೀಗಾಗಿ ಲಕ್ಷಾಂತರ ರೂ ಹಾಕಿ ಬೆಳೆ ಬೆಳೆದ ರೈತನಿಗೆ ಹಾಕಿದ ಬಂಡವಾಳವೂ ಸಿಗದಂತಾಗಿದೆ,

ಕೋಲಾರ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆ, ಅದಕ್ಕಾಗಿಯೇ ಇಲ್ಲಿ ಬೃಹತ್ ಟೊಮೆಟೊ ಮಾರುಕಟ್ಟೆಯೂ ಸ್ತಾಪಿಸಲಾಗಿದೆ, ಆದರೆ ಈ ವರ್ಷದಲ್ಲಿ ಸತತವಾಗಿ ಟೊಮೆಟೊ ಬೆಳೆದ ರೈತ ನಿರಂತರವಾಗಿ ಬೆಲೆ ಕುಸಿತ ಪ್ರಭಾವದಿಂದ ಕಂಗೆಟ್ಟಿದ್ದಾರೆ,

ಇಂದು ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಒಂದು ಕ್ರೇಟ್ ಟೊಮೇಟೊ ಗರಿಷ್ಟ ಬೆಲೆ 100 ರೂ ಇದ್ದು ಕನಿಷ್ಟ ಬೆಲೆ 30 ರೂಗೆ ಬಿಕರಿಯಾಗಿದೆ, ಆದರೆ ಲಕ್ಷಾಂತರ ಬಂಡವಾಳ ಹಾಕಿ ಟೊಮೇಟೊ ಬೆಳೆದ ರೈತರು ಹಾಕಿರೋ ಬಂಡವಾಳ ಸಿಗದೇ ಮಾರಕಟ್ಟೆಗೆ ಟೊಮೇಟೊ ತರೋದು ನಿಲ್ಲಿಸಲು ಮುಂದಾಗಿದ್ದಾರೆ.

ಇನ್ನು ಪದೇ ಪದೇ ಈ ರೀತಿ ಬೆಲೆ ಕುಸಿತ ಕಾಣುತ್ತಿರುವುದರಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ ಎಂದು ಕೋಲಾರ ರೈತ ಸಂಘಟನೆ ಜಿಲ್ಲಾಧ್ಯಕ್ಷ್ಯ ಮರಗಲ್ ಶ್ರೀನಿವಾಸ್ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದ್ದಾರೆ .

ಎಪಿಎಂಸಿ ಮಾರುಕಟ್ಟೆಗೆ ಪ್ರತಿನಿತ್ಯ ನೆರೆಯ ಆಂಧ್ರ ಮತ್ತು ತಮಿಳುನಾಡು ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯಿಂದಲೂ ಸುಮಾರು 10 ಸಾವಿರ ಟನ್ ಗಿಂತಲೂ ಹೆಚ್ಚು ಟೊಮೇಟೊ ಆವಕವಾಗ್ತಿದೆ, ಮೊದಲು ಈ ಮಾರುಕಟ್ಟೆಯಿಂದ ಕಲ್ಕತ್ತಾ, ಮುಂಬೈ, ಸೇರಿದಂತೆ ರಾಜ್ಯಕ್ಕೆ ಬೇಕಾಗುವ 60 ರಷ್ಟು ಟೊಮೇಟೊ ಇಲ್ಲಿಂದಲೇ ಸರಬರಾಜು ಆಗ್ತಿತ್ತು, ಆದ್ರೀಗ ಟೊಮೇಟೊ ಬೆಳೆಯುವ ರೈತರ ಸಂಖ್ಯೆಯೂ ಹೆಚ್ಚಾಗಿದ್ದು ಹಲವಾರು ಕಾರಣಗಳಿಂದ ಬೆಲೆಯೂ ಇಳಿಕೆಯಾಗಿದೆ, ಇದರಿಂದ ಕೋಲಾರ ಟೊಮೇಟೊ ಬೆಳೆಗೆ ಬೆಲೆ ಕಡಿಮೆಯಾಗಿ ರೈತ ಕಂಗಾಲಾಗಿದ್ದಾನೆ.

ಮಳೆ ಬಂದರು, ಬಾರದಿದ್ದರೂ, ಕೋಲಾರ ಜಿಲ್ಲೆಯ ರೈತನ ಪಾಡು ಅದೋಗತಿಯಾಗಿದೆ, ಪದೇ ಪದೇ ಟೊಮೇಟೊ ಬೆಳೆದು ನಷ್ಟದಲ್ಲಿರುವ ರೈತನಿಗೆ ಸದ್ಯ ರಾಜ್ಯ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಿ ರೈತರ ಬೆನ್ನಿಗೆ ನಿಲ್ಲಬೇಕಿದೆ ಎಂಬುದು ರೈತರ ಆಗ್ರಹವಾಗಿದೆ .

Comments are closed.