ಕರ್ನಾಟಕ

ಗೆಳೆಯರೊಂದಿಗೆ ಮಲಗುವಂತೆ ಗಂಡನ ಒತ್ತಾಯ

Pinterest LinkedIn Tumblr


ಬೆಂಗಳೂರು: ಪ್ರೀತಿಸಿ ಮದುವೆಯಾದ ಪತ್ನಿಯ ಜತೆ ವಿಕೃತವಾಗಿ ವರ್ತಿಸಿದಲ್ಲದೆ, ಆಕೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಪತಿ ಮಹಾಶಯನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಯುವತಿಯೊಬ್ಬಳನ್ನು ಪ್ರೀತಿಸಿ ಕಳೆದ 2 ವರ್ಷಗಳ ಹಿಂದೆ ಅನಿಶ್ ರ್ಯಾನ್ ಡೇನಿಯಲ್ ಡಿಸೋಜಾ ಎಂಬಾತ ಮದುವೆಯಾಗಿದ್ದ. ಇಬ್ಬರು ಮೂಲತಃ ಮಧ್ಯಪ್ರದೇಶದ ಗ್ವಾಲಿಯರ್​ನವರಾಗಿದ್ದು, ಮದುವೆಯ ನಂತರ 2 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಸಂತ್ರಸ್ತೆ ಯುವತಿ ವೃತ್ತಿಯಲ್ಲಿ ಖಾಸಗಿ ಶಾಲಾ ಶಿಕ್ಷಕಿಯಾದ್ರೆ, ಆರೋಪಿ ಪತಿರಾಯ ಖಾಸಗಿ ಕಂಪನಿಯೊಂದರಲ್ಲಿ ಹೆಚ್.ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.

ವೀಕೆಂಡ್​ನಲ್ಲಿ ಪಾರ್ಟಿ ಮುಗಿಸಿ ಗೆಳೆಯರೊಂದಿಗೆ ಮನೆಗೆ ಬರುತ್ತಿದ್ದ ಆರೋಪಿ ಪತಿ ಕೈಹಿಡಿದ ಪತ್ನಿಯನ್ನು ಗೆಳೆಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹಿಂಸೆ ನೀಡುತ್ತಿದ್ದ. ಅಲ್ಲದೆ, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ, ಇದಕ್ಕೆ ಒಪ್ಪದಿದ್ದಾಗ ಜೀವಬೆದರಿಕೆ ಹಾಕುತ್ತಿದ್ದ ಎಂದು ಹೇಳಲಾಗಿದೆ.

ಇದಲ್ಲದೆ, ಪತ್ನಿಯ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆಯುತ್ತಿದ್ದ ಎಂಬ ಆರೋಪವು ಕೇಳಿಬಂದಿದೆ. ಪತಿಯ ಈ ನಡೆಗೆ ಬೇಸತ್ತ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ಆರೋಪಿ ಅನಿಶ್ ಡೇನಿಯಲ್‌ ಡಿಸೋಜಾನನ್ನು ಬಂಧಿಸಿದ್ದು, ಪೂರ್ವ ವಲಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.