
ಚಿಕ್ಕೋಡಿ: ಕೃಷ್ಣಾ ನದಿ ಭಾಗದ ರೈತರು ಯಾವ ಪಾಪಾ ಮಾಡಿದ್ರೊ ಗೊತ್ತಿಲ್ಲ. ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಂಗಾಲಾಗಿದ್ದರು. ಈಗ ಮತ್ತೆ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ.
ಮಹಾರಾಷ್ಟ್ರ ಮೂಲದ ಮಹಾ ರೈತ ಅಗ್ರೋ ಪ್ರೈವೆಟ್ ಲಿಮಿಟೆಡ್ ಕಂಪನಿಯಿಂದ ಚಿಕ್ಕೋಡಿ, ರಾಯಭಾಗ ಹಾಗೂ ಅಥಣಿ ತಾಲೂಕಿನ ವ್ಯಾಪ್ತಿಯಲ್ಲಿ ರೈತರು ಸೈಡ್ ಬಿಸಿನೆಸ್ ಎಂದು ಕಡಕನಾಥ್ ಕೋಳಿ ಸಾಕಾಣಿಕೆ ಬಹಳ ಮುಖ್ಯವಾಗುತ್ತದೆ ಎಂದು ರೈತರನ್ನು ಮನವೊಲಿಸಿ 100 ಕೋಳಿಗೆ 1.20 ಲಕ್ಷ ರುಪಾಯಿ ನಷ್ಟು ಡಿಪಾಸಿಟ್ ಮಾಡಿಕೊಂಡು ರೈತರಿಗೆ ಸುಮಾರು 100 ಕೋಳಿಗಳನ್ನು ಒದಗಿಸಿದರು.
ಮತ್ತೊಂದು ವಿಶೇಷ ಏನೆಂದರೆ ಇವುಗಳ ಮೊಟ್ಟೆ ಒಂದಕ್ಕೆ 60 ರೂಪಾಯಿಗೆ ಖರೀದಿಸುತ್ತಿದ್ದರು. ಕೋಳಿಯ ಅವದಿ 8 ತಿಂಗಳು ಇದೆ. 8 ತಿಂಗಳು ಆದ ಮೇಲೆ ಕಂಪನಿಯವರೇ ಆ ಕೋಳಿಯನ್ನು 400 ರೂಪಾಯಿಯಂತೆ ಖರೀದಿಸುತ್ತಾರೆ ಎಂದು ರೈತರಿಗೆ ಭರವಸೆ ನೀಡಿದ್ದರು. ಈ ಮೊಟ್ಟೆ ಹಾಗೂ ಕೋಳಿಯನ್ನು ಬೇರೆ ಕಡೆ ಮಾರಾಟ ಮಾಡಬಾರದು ಕಂಪನಿಯವರೇ ಒಯ್ಯುತ್ತೇವೆಂದು ಬಾಂಡ್ ಮಾಡಿಕೊಂಡಿದ್ದರು. ಆದರೆ ಈಗ ಆ ಭರವಸೆ ಪೊಳ್ಳಾಗಿದೆ.
ಇತ್ತೀಚಿಗೆ ಅಗ್ರೋ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮಾಲೀಕ ವಾಟ್ಸಪ್ ಗ್ರೂಪ್ ಒಂದರಲ್ಲಿ ಈ ಕೋಳಿಗಳಿಂದ ನನಗೆ ಬಹಳ ಲಾಸ್ ಆಗಿದೆ. ಇದನ್ನು ಬೇರೆ ಕಂಪನಿಯವರ ಜೊತೆ ಟೈಯಪ್ ಮಾಡಿಕೊಳ್ಳಿ ಎಂದು ವಿಡಿಯೋ ವೈರಲ್ ಮಾಡಿ ಬಿಡುತ್ತಾನೆ.
ಇದನ್ನು ಕಂಡು ಕರ್ನಾಟಕ ಅಷ್ಟೇ ಅಲ್ಲ ಮಹಾರಾಷ್ಟ್ರದ ರೈತರಲ್ಲಿ ಆತಂಕ ಮನೆ ಮಾಡಿತು. ತಕ್ಷಣ ಮಾಲೀಕನಿಗೆ ಪೋನ್ ಮಾಡಿದರೂ ಎಲ್ಲವೂ ಫೋನ್ ಸ್ವಿಚ್ ಆಫ್ ಆಗಿದೆ . ರೈತರು ಒಂದು ತಿಂಗಳಿಂದ ನಿರಂತರ ಸಂಪರ್ಕ ಮಾಡಿದರೂ ಸಿಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.
ಇನ್ನೂ ಇದೇ ವಿಷಯವಾಗಿ ಕರ್ನಾಟಕ ರಾಯಭಾಗ, ಅಥಣಿ, ಚಿಕ್ಕೋಡಿ ಭಾಗದಲ್ಲಿ ಸರಿಸುಮಾರು 347 ಕೋಳಿ ಫಾರ್ಮಂ ಇವೆ. ಅದರಲ್ಲಿ 33000 ಕೋಳಿಗಳು ಇವೆ. ದಿನಕ್ಕೆ 9.60 ಲಕ್ಷ ರೂಪಾಯಿ ನಷ್ಟು ಮೊಟ್ಟೆ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು. ಆದರೆ ಕಳೆದ ಒಂದು ತಿಂಗಳಿಂದ ಮೊಟ್ಟೆಗಳು ಸಾಗಾಟವಾಗಿಲ್ಲ. ಅಲ್ಲದೇ ಕೋಳಿಗಳಿಗೆ ಆಹಾರವೂ ಕಂಪನಿಯೇ ಒದಗಿಸುತ್ತಿತ್ತು. ಆದರೆ ಆಹಾರ ಒದಗಿಸದೇ ಇರುವುದರಿಂದ ಕೋಳಿಗಳು ಚಡಪಡಿಸುತ್ತಿವೆ.
ಕೋಳಿಗಳನ್ನು 8 ತಿಂಗಳಿಗೆ 400 ರೂಪಾಯಿ ಕೊಟ್ಟು ತೆಗೆದುಕೊಂಡು ಹೋಗುತ್ತಾರೆಂದು ಹೇಳಿದ್ದರು. ಆದರೆ ಯಾವುದೇ ರೀತಿಯಿಂದ ಜನರಿಗೆ ಕಂಪನಿವತಿಯಿಂದ ಸಹಕಾರ ಸಿಗಲಿಲ್ಲ. ಇದರಿಂದ ಚಿಕ್ಕೋಡಿ ಭಾಗದಲ್ಲಿ ಡಿಪಾಸಿಟ್, ಮೊಟ್ಟೆಯ ಒಟ್ಟಾರೆ ಹಣ, ಒಂದು ಕೋಳಿಗೆ 400 ರೂಪಾಯಿಯಂತೆ ಲೆಕ್ಕಾಚಾರ ಮಾಡಿದರೆ ಸುಮಾರು 8-10 ಕೋಟಿರೂಪಾಯಿ ನಷ್ಟು ರೈತರಿಗೆ ನಷ್ಟವಾಗಿದೆ.
ಇನ್ನೂ ರೈತರು ಈ ವಿಷಯವಾಗಿ ಕರ್ನಾಟಕ ರೈತರು ಮಹಾರಾಷ್ಟ್ರದ ಸಾಂಗಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದಾರೆ. ಅಲ್ಲಿ ನಾವು ಕೊಟ್ಟಿರುವ ಡಿಪಾಸಿಟ್ ಕೊಡಿ ನಮಗೆ ಲಾಭ ಬೇಡ ಎಂದು ತಮ್ಮ ಅಳಲನ್ನು ರೈತರು ತೋಡಿಕೊಂಡಿದ್ದಾರೆ.
ಕೋಳಿಯಿಂದ ರೈತರಿಗೆ ಪ್ರಾರಂಭದಲ್ಲಿ ಲಾಭವಾಗುತ್ತದೆ ಎಂದು ಆಸೆ ತೋರಿಸಿ ಈಗ ಮಹಾರಾಷ್ಟ್ರ ಕಂಪನಿಯೂ ರೈತರನ್ನು ಮತ್ತೇ ಹಳ್ಳಕ್ಕೆ ತಳ್ಳಿದೆ ಅಂತನೇ ಹೇಳಬಹುದು. ಈಗಾಗಲೇ ಕೃಷ್ಣಾ ನದಿ ಪ್ರವಾಹದಿಂದ ನಲುಗಿಹೋಗಿರುವ ರೈತರಿಗೆ ಈಗ ಕೇಂದ್ರ ಸರಕಾರ ಮದ್ಯಸ್ಥಿಕೆವಹಿಸಿ ರೈತರ ಸಮಸ್ಯೆ ಬಗೆಹರಿಸಬೇಕಿದೆ.
Comments are closed.