ರಾಷ್ಟ್ರೀಯ

ರಾಹುಲ್ ಗಾಂಧಿ ಮಾತನಾಡಿದರೆ ಪಾಕಿಸ್ತಾನ ಚಪ್ಪಾಳೆ ತಟ್ಟುತ್ತದೆ: ಅಮಿತ್ ಶಾ

Pinterest LinkedIn Tumblr


ಸಿಲ್ವಾಸಾ: ವಿಶ್ವಸಂಸ್ಥೆಗೆ ಪಾಕ್‌ ನೀಡಿದ ದೂರಿನಲ್ಲಿ ರಾಹುಲ್‌ ಗಾಂಧಿ ಹೆಸರು ಉಲ್ಲೇಖ ಮಾಡಿರೋದಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ.

ಕಾಂಗ್ರೆಸ್‌ ಆರ್ಟಿಕಲ್ 370 ರದ್ದು ವಿರೋಧಿಸಿರುವುದು ಪಾಕ್‌ಗೆ ಖುಷಿಯಾಗಿದೆ. ರಾಹುಲ್‌ ಮಾತನಾಡಿದರೆ ಪಾಕ್‌ ಚಪ್ಪಾಳೆ ತಟ್ಟುತ್ತದೆ. ಪಾಕ್‌ ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ರಾಹುಲ್‌ ಹೇಳಿಕೆ ಸೇರಿಸಿದ್ದಕ್ಕೆ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಭಾರತದೊಂದಿಗೆ ಕಾಶ್ಮೀರದ ಏಕೀಕರಣವು ಪಾಕ್‌ ಪ್ರಾಯೋಜಿತ ಭಯೋತ್ಪಾದನೆಗೆ ಕೊನೆ ಮೊಳೆಯಾಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ ಮೊದಲ ಸಂಸತ್ ಅಧಿವೇಶನದಲ್ಲೇ 370ನೇ ವಿಧಿಯನ್ನು ರದ್ದುಪಡಿಸುವ ದಿಟ್ಟ ನಿರ್ಧಾರ ಕೈಗೊಂಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಜತೆ ಏಕೀಕರಣಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿದೆ ಎಂದು ಇದೇ ವೇಳೆ ಅಮಿತ್​ ಶಾ ಶ್ಲಾಘಿಸಿದರು.

Comments are closed.