ಕರ್ನಾಟಕ

ಯಡಿಯೂರಪ್ಪ ಅನುಭವಿಸುತ್ತಿರುವ ಅವಮಾನ, ಅನ್ಯಾಯದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: 14 ತಿಂಗಳ ಸಮ್ಮಿಶ್ರ ಸರ್ಕಾರವನ್ನು ಏಳನೇ ಪ್ರಯತ್ನದಲ್ಲಿ ಬೀಳಿಸಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಎಸ್​ ಯಡಿಯೂರಪ್ಪ ಯಶಸ್ವಿಯಾದರು. ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗ ಬೇಕು ಎಂಬ ಅವರ ಕನಸು ಈಡೇರಿತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ಕೇವಲ ನಾಮಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರದ ಸಂಪೂರ್ಣ ಹತೋಟಿಯನ್ನು ಹೈ ಕಮಾಂಡ್​ ಹಾಗೂ ಬಿಎಲ್​ ಸಂತೋಷ್​ ಬಣ ಹೊಂದಿದೆ. ಈ ಕುರಿತು ಲೇವಡಿ ಮಾಡಿರುವ ಸಿದ್ದರಾಮಯ್ಯ ಬಿಎಸ್​ವೈ ಅನುಭವಿಸುತ್ತಿರುವ ಅವಮಾನ, ಅನ್ಯಾಯದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸರಿಯಾಗಿ ಒಂದು ತಿಂಗಳ ಬಳಿಕ ಈಗ ಖಾತೆ ಹಂಚಿಕೆಯಾಗಿದೆ. ಆತುರದಲ್ಲಿ ಸರ್ಕಾರ ರಚನೆ ಮಾಡಿದ ಬಿಜೆಪಿ, ಖಾತೆ ಹಂಚಿಕೆ, ಸಚಿವರ ನೇಮಕದಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಯಿತು. ಕಾರಣ ಬಿಎಸ್​ವೈ ಸರ್ಕಾರದ ಮೇಲೆ ಹೈ ಕಮಾಂಡ್​ ಹೊಂದಿದ್ದ ಹಿಡಿತ.

ಸರ್ಕಾರದಲ್ಲಿ ಬಿಎಸ್​ವೈ ಮಾತಿಗಿಂತ ಆರ್​ಎಸ್​ಎಸ್​ ನಾಯಕರ ಮಾತು ಹೆಚ್ಚಿನ ಮಾನ್ಯತೆ ಹೊಂದಿದೆ. ಇದೇ ಕಾರಣಕ್ಕೆ ಸವದಿ, ಕಾರಜೋಳರಿಗೆ ಅಶ್ವತ್ಧ ನಾರಾಯಣರಿಗೆ ಸಿಕ್ಕ ಲಾಭಾದಾಯಕ ಹುದ್ದೆಗಳು. ಬಿಎಸ್​ ಯಡಿಯೂರಪ್ಪ ಸೂಚಿಸಿದ ನಾಯಕರಿಗೆ ಹೈ ಕಮಾಂಡ್​ ಯಾವುದೇ ಪ್ರಮುಖ ಖಾತೆಯನ್ನು ನೀಡಿಲ್ಲ. ಅಲ್ಲದೇ ಸವದಿಯನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಭಿನ್ನಮತ ಹೆಚ್ಚಾಗುತ್ತದೆ ಎಂಬ ಬಿಎಸ್​ವೈ ಮಾತಿಗೂ ಮನ್ನಣೆ ಸಿಕ್ಕಿಲ್ಲ.

ಇದರ ಜೊತೆಗೆ ಬಿಜೆಪಿ ಅಧ್ಯಕ್ಷರಾಗಿ ಕಟ್ಟಾರ್​ ಹಿಂದೂತ್ವವಾದಿಯಾದ ನಳಿನ್​ ಕುಮಾರ್​ ಕುಮಾರ್​ ನೇಮಕ ಮಾಡಲಾಗಿದೆ. ಇದರಿಂದಾಗಿ ಪಕ್ಷ ಹಾಗೂ ಸರ್ಕಾರದ ನಡುವೆ ಹೇಗೆ ಸಮನ್ವಯತೆ ಮೂಡಲಿದೆ. ಸರ್ಕಾರವನ್ನು ನಿಯಂತ್ರಣದಲ್ಲಿಡಲೇ ಅವರಿಗೆ ಈ ಹುದ್ದೆ ನೀಡಲಾಗಿದೆ. ಜೊತೆಗೆ ಯಡಿಯೂರಪ್ಪ ಅಧಿಕಾರದ ಮೇಲೆ ಹಿಡಿತ ಸಾಧಿಸಲು ಮೂವರು ಡಿಸಿಎಂಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಜನಪ್ರತಿನಿಧಿಗಳ ಧ್ವನಿಯನ್ನು ಉಡುಗಿಸುವ ಕೆಲಸವನ್ನು ಮಾಡಲಾಗಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸದ್ಯ ಬಿಜೆಪಿ ಸರ್ಕಾರದಲ್ಲಿ ಮೂಡಿರುವ ಭಿನ್ನಮತ ಸರಿದೂಗಿಸುವುದು ಸುಲಭವಲ್ಲ. ಕಾರಣ. ಇದರ ನಿಯಂತ್ರಣವಿರುದು ಹೈ ಕಮಾಂಡ್​ನಲ್ಲಿ. ಸಚಿವರ ನೇಮಕಕ್ಕೆ 26 ದಿನ, ಖಾತೆ ಹಂಚಿಕೆಗೆ 6 ದಿನ ಸಮಯ ತೆಗೆದುಕೊಂಡ ಸರ್ಕಾರ ಈಗ ಅಸಮಾಧಾನಿತ ಸಚಿವರ ಓಲೈಕೆಗೆ ಎಷ್ಟುದಿನ ತೆಗೆದುಕೊಳ್ಳಲಿದೆ. ಈ ರೀತಿ ಭಿನ್ನಮತದಿಂದ ರಾಜ್ಯದ ಆಡಳಿತ ಹೇಗೆ ನಡೆಯಲಿದೆ. ಇಂತಹ ಸರ್ಕಾರ ಇರುವುದಕ್ಕಿಂತ ಚುನಾವಣೆಗೆ ಹೋಗುವುದು ಒಳ್ಳೆಯದು. ಆಗ ಜನರು ತಮಗೆ ಬೇಕಾದವರ ಆಯ್ಕೆ ಮಾಡುವರು ಎಂದಿದ್ದರು.

Comments are closed.