ಕರ್ನಾಟಕ

ಈಶ್ವರಪ್ಪ ಕುರಿತು ‘ಪಾಪ’ ಎಂದ ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟೆ: ಕೈ ಪಕ್ಷದಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಅವರು ಹೇಳಿದ್ದು ನನಗ್ಯಾಕೆ ಹೋಲಿಸುತ್ತೀರಿ, ಅವರು ಹೇಳಿದ್ದು ನನಗೆ ಅಂತ ಯಾಕೆ ಹೇಳುತ್ತೀರಿ ಎಂದು ಅವರು ಸೋಮವಾರ ಗರಂ ಆಗಿದ್ದರು.

ಬಾಗಲಕೋಟೆಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ ಅಂತ ನಾನೆಲ್ಲಿ ಹೇಳಿದ್ದೀನಿ, ನಾನು ಆಗಬೇಕು ಅಂತ ನಮ್ಮ ಬೆಂಬಲಿಗರು ಹೇಳುತ್ತಿದ್ದಾರೆ ಎಂದು ಅವರು ನುಡಿದರು.

ಸದ್ಯ ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಬಿ.ಎಸ್​ ಯಡಿಯೂರಪ್ಪ ಅವರ ಆದೇಶ ಹೊರಡಿದ್ದೇದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಯ್ಯಯಪ್ಪ ಮಾಡ್ಲಿ, ಬ್ಯಾಡ ಅಂದೋರ್ಯಾರು(?) ತಪ್ಪು ಮಾಡಿದವರ್ಗೆ ಶಿಕ್ಷೆ ಆಗಲಿ ಎಂದರು.

ಇನ್ನು ಕೇಂದ್ರದಿಂದ 1,029 ಕೋಟಿ ಅನುದಾನ ಬಿಡುಗಡೆ ವಿಷಯವಾಗಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಇದು ನೆರೆಗೆ ಕೊಟ್ಟಿದ್ದಲ್ಲ, ಈ ಹಿಂದೆ ಕುಮಾರಸ್ವಾಮಿ ಸಿಎಂ ಇದ್ದಾಗ ಬರಕ್ಕೆ ಮೆಮರಡಂ ಕೊಟ್ಟಿದ್ದರು, ಈಗ ಇವರು (ಬಿಎಎಸ್​ವೈ) ಮೆಮರಿಡಂ ಕೊಡಬೇಕು, ಆಮೇಲೆ ಎಷ್ಟು ಕೊಡುತ್ತಾರೆ, ನೋಡಬೇಕು ಅದು ಇನ್ಮೇಲೆ ಬರಬೇಕು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಕೇಂದ್ರದ ಹಣ ಬರ, ನೆರೆ ಯಾವುದಕ್ಕಾದರೂ ಬಳಸಬಹುದು ಅಂದಿದ್ದ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ ಈಶ್ವರಪ್ಪಗೆ ಮೊದ್ಲೆ ಬುದ್ದಿ ಇಲ್ಲ ಅವ್ರಿಗೆ ಇನ್ನೇನು ಗೊತ್ತಾಗುತ್ತೆ ಪಾಪ ಎಂದು ಈಶ್ವರಪ್ಪ ಅವರ ಮಾತಿನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುದ್ದು ಕೊಟ್ಟಿದ್ದಾರೆ.

Comments are closed.