ಕರ್ನಾಟಕ

ಉಮೇಶ್​ ಕತ್ತಿ ಸಂಧಾನ ಮತ್ತೆ ವಿಫಲ ಯತ್ನ

Pinterest LinkedIn Tumblr


ಲಕ್ಷ್ಮಣ್‌ ಸವದಿಗೆ ಮಂತ್ರಿ ಸ್ಥಾನ ಕೊಟ್ಟಿರೋದು ಉಮೇಶ್ ಕತ್ತಿ ಅವರಲ್ಲಿ ಕಿಚ್ಚೆಬ್ಬಿಸಿದೆ. ನೇರವಾಗಿ ಬಂಡಾಯದ ಬಾವುಟ ಹಾರಿಸಿರುವ ಕತ್ತಿ ಸಮಾಧಾನ ಮಾಡೋದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂದು ಕೂಡ ಇಂತಹದ್ದೇ ವಿಫಲ ಯತ್ನ ಮಾಡಿದರು.

ಎಲ್ಲವನ್ನೂ ಮುಖಾಮುಖಿಯಾಗಿಯೇ ಬಗೆಹರಿಸಲು ಇಂದು ತಮ್ಮ ಧವಳಗಿರಿ ನಿವಾಸಕ್ಕೆ ಉಮೇಶ್ ಕತ್ತಿ ಮತ್ತು ಲಕ್ಷ್ಮಣ್‌ ಸವದಿ ಅವರನ್ನು ಕರೆಸಿದ್ದರು. ಇವರಿಬ್ಬರ ಸಮ್ಮುಖದಲ್ಲಿ ಸಿಎಂ ಚರ್ಚಿಸಿದರು. ಮನವೊಲಿಕೆ ಮಾಡಲು ಮುಂದಾದರು. ಆದರೆ, ಸಿಎಂ ಸಮ್ಮುಖದಲ್ಲೇ ಕತ್ತಿ ಮತ್ತು ಸವದಿ ಕಿತ್ತಾಡಿಕೊಂಡಿದ್ದಾರೆ. ಏರುಧ್ವನಿಯಲ್ಲಿ ಹಾಗೂ ಏಕವಚನದಲ್ಲಿ ಲಕ್ಷ್ಮಣ ಸವದಿ ವಿರುದ್ಧ ಕತ್ತಿ ಹರಿಹಾಯ್ದಿದ್ದಾರೆ ಅಂತ ತಿಳಿದುಬಂದಿದೆ.

ನೀನು ಸೋತವನು. ನಾನು ಸತತ ಗೆದ್ದವನು. ನನಗೆ ನೀಡದೇ ನಿನಗೆ ನೀಡಿದರೆ ಹೇಗೆ..? ನೀನು ಹೈಕಮಾಂಡ್​ನಲ್ಲಿ ಇನ್​ಫ್ಲೂವೆನ್ಸ್​ ಮಾಡಿಸಿದ್ದೀಯಾ..? ಅಂತ ಕತ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇವರಿಬ್ಬರ ಜಗಳ ಅತಿರೇಕಕ್ಕೂ ಹೋಗಿತ್ತು ಎಂತ ಹೇಳಲಾಗ್ತಿದೆ.

ಇವರಿಬ್ಬರ ಏಕವಚನ ಪ್ರಯೋಗದ ಕಿತ್ತಾಟಕ್ಕೆ ಸಿಎಂ ಯಡಿಯೂರಪ್ಪ ಬೆಚ್ಚಿಬಿದ್ದಾರೆ. ನಿಮ್ಮ ಮನಸಿಗೆ ಬಂದ ಹಾಗೆ ಮಾಡಿ ಅಂತ ಇಬ್ಬರನ್ನೂ ಮನೆಯಿಂದ ಸಾಗ ಹಾಕಿದ್ದಾರೆ. ಹೊರಬಂದ ಉಮೇಶ್​ ಕತ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಕೋಪದಲ್ಲೇ ಬಂದ ದಾರಿ ಹಿಡಿದರು. ಉಮೇಶ್​ ಕತ್ತಿ ಕಥೆ ಇಷ್ಟಾದರೆ, ಖಾತೆ ಹಂಚಿಕೆ ಇನ್ನೂ ಆಗಿಲ್ಲ. ಖಾತೆ ಬಯಸಿ ಮಂತ್ರಿಗಳು ಸಿಎಂ ಮನೆ ಮುಂದೆ ಗಿರಿಕಿ ಹೊಡಿತಿದ್ದಾರೆ. ಆರ್​.ಅಶೋಕ್​, ಅಶ್ವಥ್ ನಾರಾಯಣ, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ ಸೇರಿದಂತೆ ಅನೇಕರು ಧವಳಗಿರಿ ಎಡತಾಕುತ್ತಿದ್ದಾರೆ.

ನಾಳೆ ಮಧ್ಯಾಹ್ನದೊಳಗೆ ಖಾತೆ ಹಂಚಿಕೆ ಫೈನಲ್‌ ಮಾಡ್ತೀನಿ ಅಂತ ನಿನ್ನೆ ರಾತ್ರಿ ದೆಹಲಿಯಿಂದ ಬಂದಾಗ ಸಿಎಂ ಹೇಳಿದ್ದರು. ಆದರೆ, ಇಂದು ಕೂಡ ಖಾತೆ ಹಂಚಿಕೆ ಫೈನಲ್​ ಆಗಲೇ ಇಲ್ಲ. ಸೋಮವಾರವೇ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣವಾಗಬಹುದು ಎಂದು ಹೇಳಲಾಗ್ತಿದೆ.

Comments are closed.