ಕರ್ನಾಟಕ

ಜಿಮ್‌ಗೆ ಹೋಗುವವರು ಇದನ್ನು ಓದಲೇಬೇಕು…

Pinterest LinkedIn Tumblr


ಬೆಂಗಳೂರು: ಇಂದಿನ ಪೀಳಿಗೆಯವರಿಗೆ ಫಿಟ್‌ನೆಸ್ ಅಂದ್ರೆ ತುಂಬಾನೇ ಮುಖ್ಯಾ. ಫಿಟ್‌ನೆಸ್‌ಗಾಗಿ ಡಯಟ್ ಮಾಡೋದು, ಮಾತ್ರೆ ತೆಗೆದುಕೊಳ್ಳುವುದು, ಜಿಮ್‌ಗೆ ಹೋಗಿ ಮೈಹುರಿಗೊಳಿಸುವುದು ಇತ್ಯಾದಿಗಳಿಗೆ ಮೊರೆ ಹೋಗ್ತಾರೆ. ಆದ್ರೆ ಇದೇ ಫಿಟ್‌ನೆಸ್ ಮಂತ್ರದಿಂದ ನಿಮ್ಮ ಜೀವನಕ್ಕೆ ಕುತ್ತು ಬರೋ ಸಾಧ್ಯತೆ ಇದೆ.

ತನ್ನ ಜಿಮ್ ಸೆಂಟರ್‌ಗೆ ಬರುತ್ತಿದ್ದವರಿಗೆ ಸ್ಟಿರಾಯ್ಡ್ ಕೊಡುತ್ತಿದ್ದ ಜಿಮ್ ಟ್ರೈನರ್‌ ಓರ್ವನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್‌ನೆಸ್ ಹೆಸರಿನ ಜಿಮ್‌ ಟ್ರೈನರ್ ಶಿವಕುಮಾರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ತನ್ನ ಜಿಮ್ ಸೆಂಟರ್‌ಗೆ ಬರುತ್ತಿದ್ದವರಿಗೆ ಸ್ಟಿರಾಯ್ಡ್ ನೀಡುತ್ತಿದ್ದ.

ದೇಹ ದಪ್ಪಗಾಗಲು ಮತ್ತು ತೆಳ್ಳಗಾಗಲು ಶಿವಕುಮಾರ್ ಔಷಧಿ ನೀಡ್ತಿದ್ದು, ಈ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ದಾಳಿ ನಡೆಸಿ, ಶಿವಕುಮಾರ್‌ನನ್ನು ಅರೆಸ್ಟ್ ಮಾಡಿದ್ದಾರೆ. ದಾಳಿ ವೇಳೆ ಜಿಮ್‌ನಲ್ಲಿ ಹಲವು ಸ್ಟಿರಾಯ್ಡ್‌ಗಳು, ಬ್ಯಾನ್‌ ಆಗಿರುವ ಸ್ಟಿರಾಯ್ಡ್‌ಗಳು, ದೇಹ ಹುರಿಗೊಳಿಸಲು ಟ್ಯಾಬ್ಲೇಟ್‌ ಮತ್ತು ಇಂಜೆಕ್ಷನ್‌ಗಳು, ಪ್ರೋಟಿನ್ ಬಾಟಲ್‌ಗಳು ಸಹ ಪತ್ತೆಯಾಗಿದೆ.

ಶಿವಕುಮಾರ್ ಆನ್‌ಲೈನ್ ಮೂಲಕ ಸ್ಟಿರಾಯ್ಡ್ ತರಿಸಿಕೊಂಡು, ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸ್ಟಿರಾಯ್ಡ್ ನೀಡುತ್ತಿದ್ದ. ಇನ್ನು ಈ ಸ್ಟಿರಾಯ್ಡ್ ಬಳಕೆಯಿಂದ ಪುರುಷತ್ವಕ್ಕೆ ಕುತ್ತು ಬರುತ್ತದೆ. ಆದರೂ ಕೂಡ ಇದನ್ನ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಶಿವಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಪೊಲೀಸರು ಜಪ್ತಿಯಾದ ಔಷಧಿಗಳ ತಪಾಸಣೆಗೆ ಮುಂದಾಗಿದ್ದು, ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

Comments are closed.