ಕರ್ನಾಟಕ

ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು..?

Pinterest LinkedIn Tumblr


ವಿಜಯಪುರ: ತನಗೂ ಸಿಎಂ ಆಗುವ ಅವಕಾಶ ಇದೆ ಎನ್ನುವ ಮೂಲಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದಲ್ಲಿಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,75 ವರ್ಷವಾಗಿದ್ದರೆ ಆಡ್ವಾಣಿಯವರಂತೆ ನನ್ನನ್ನೂ ರಿಟೈರ್ ಮಾಡುತ್ತಿದ್ದರು. ನನಗಿನ್ನೂ 54 ವರ್ಷ. ನನಗೆ ಮುಖ್ಯಮಂತ್ರಿ ಹಾಗೂವ ಅವಕಾಶವಿದೆ ಎಂದು ಬಸನಗೌಡ ಪಾಟೀಲ್ ಹೇಳಿದ್ದಾರೆ.

ನನಗೆ ಇನ್ನು 25 ವರ್ಷ ಭವಿಷ್ಯವಿದೆ ಸಿಎಂ ಆಗೋಕೆ, ನಾನು ಸಿಎಂ ಆಗುವ ಘಟನೆ ಆಗಬಹುದು ಎಂದರು. ಇನ್ನೂ ಸಿಎಂ ಬಿಎಸ್​​ವೈ ತಮ್ಮಗೆ ಬೇಕಿರುವವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಆದರೆ, ಶಾಸಕರ ಜಗಳ, ಅಶಾಂತಿ ಮಾಡಿದರೆ ಜನಸಾಮಾನ್ಯರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ನುಡಿದರು.

ಬಿಜೆಪಿ ಅತೃಪ್ತ ಶಾಸಕರು ಇಲ್ಲದ ಹೇಳಿಕೆ ನೀಡಿದರೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದರು. ಇತ್ತ ಶಾಸಕರು ಮಂತ್ರಿ ಆಗುವ ಕನಸು ಬಿಟ್ಟು ಮತಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಇದೇ ವೇಳೆ ಮನವಿ ಮಾಡಿದರು.

ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರವರ ಜಗಳ ಬಗ್ಗೆ ನನ್ಯಾಕೆ ಮಾತಾಡಬೇಕು ನಮಗೆ ಇದರ ಬಗ್ಗೆ ಏನು ಸಂಬಂಧವಿಲ್ಲ ಎಂದು ಯತ್ನಾಳ್ ತಿಳಿಸಿದರು.
14 ತಿಂಗಳ ಮೈತ್ರಿ ಸರ್ಕಾರವನ್ನು ಟೀಕಕಾರರು ಟೀಕೆ ಮಾಡುತ್ತಿದ್ದಾರೆ . ಸತ್ಯಾಸತ್ಯತೆ ಅವರೇ ಬಹಿರಂಗ ಮಾಡುತ್ತಾರೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Comments are closed.