
ಹಣದ ಆಸೆಗೆ ಓಲಾ ಕ್ಯಾಬ್ ಚಾಲಕ ಕೋಲ್ಕತ್ತಾ ಮೂಲದ ರೂಪದರ್ಶಿಯನ್ನ ಕೊಲೆ ಮಾಡಿದ್ದ ಸಂಗತಿಯನ್ನ ಬೆಂಗಳೂರಿನ ಬಾಗಲೂರು ಪೊಲೀಸ್ರು ಬೇಧಿಸಿದ್ದಾರೆ. ಜುಲೈ ೩೧ ರಂದು ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಈ ಅಪರಿಚಿತ ಶವದ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರಿಗೆ ಒಂದು ಜೀನ್ಸ್ ಪ್ಯಾಂಟ್ ಮತ್ತು ಟೈಟಾನ್ ವಾಚ್ ಮಾತ್ರ ಆಧಾರವಾಗಿತ್ತು.
ಆದರೂ ಪಟ್ಟು ಬಿಡದೆ ತನಿಖೆ ಮುಂದುವರೆಸಿದ ಬಾಗಲೂರು ಪೊಲೀಸರು, ಈಗ ಪ್ರಕರಣ ಭೇಧಿಸಿದ್ದು ಕೊಲೆಯಾದ ಮಹಿಳೆ ಪೂಜಾ ಸಿಂಗ್ ಹಾಗೂ ಕೊಲೆ ಮಾಡಿದ್ದು ನಾಗೇಶ್ ಎಂಬ ಓಲಾ ಕ್ಯಾಬ್ ಚಾಲಕ ಎಂಬುದನ್ನ ಪತ್ತೆ ಹಚ್ಚಿದ್ದಾರೆ.
ಮೊದಲಿಗೆ ಪ್ರಕರಣ ದಾಖಲಾದಾಗ ಮಹಿಳೆ ಯಾರು ಎಂಬುದೇ ಪೊಲೀಸ್ರಿಗೆ ದೊಡ್ಡ ಸವಾಲಾಗಿತ್ತು. ಏಕೆಂದರೆ ಆರೋಪಿ ಆಕೆಯ ಎಲ್ಲ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದ. ಕೊನೆಗೆ ಆಕೆ ಹಾಕಿದ್ದ ಜೀನ್ಸ್ ಪ್ಯಾಂಟ್ ಹಾಗೂ ಟೈಟನ್ ವಾಚ್ ನಿಂದಾಗಿ ಆಕೆ ಕೋಲ್ಕತ್ತಾ ಮೂಲದ ಮಹಿಳೆ ಎಂಬುದನ್ನ ಪತ್ತೆ ಹಚ್ಚಿದರು. ನಂತರ ತಂಡವೊಂದು ಕೋಲ್ಕತ್ತಾಗೆ ಹೋದಾಗ ಅಲ್ಲಿಯ ನ್ಯೂಟೌನ್ ಠಾಣೆಯಲ್ಲಿ ಈಕೆಯ ಬಗ್ಗೆ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತು. ಆಗಲೇ ಗೋತ್ತಾಗಿದ್ದು ಈಕೆ ಕೋಲ್ಕತ್ತಾದ ರೂಪದರ್ಶಿ ಪೂಜಾಸಿಂಗ್ ದೇ ಅಂತಾ.
ಪೂಜಾಸಿಂಗ್ ಮಾಡೆಲ್ ಜೊತೆ ಫ್ರೀಲಾನ್ಸ್ ಈವೆಂಟ್ ಮ್ಯಾನೇಜ್ಮೆಂಟ್ ಮಾಡ್ತಾ ಇದ್ದಳು. ಹೀಗಾಗಿ ಕೆಲಸದ ನಿಮ್ಮಿತ್ತ ಬೆಂಗಳೂರಿಗೆ ಬಂದಿದ್ದ ಪೂಜಾ ಕ್ರೆಸೆಂಟ್ ರಸ್ತೆಯಲ್ಲಿ ಕೆಲಸ ಮುಗಿಸಿ. ಇದೆ ಕೊಲೆಗಡುಕ ನಾಗೇಶನ ಓಲಾ ಕ್ಯಾಬ್ ಬುಕ್ ಮಾಡಿ ಪರಪ್ಪನ ಆಗ್ರಹಾರ ಬಳಿಯ ಹೋಟೇಲ್ ಗೆ ಹೋಗಿದ್ದಳು ಆದರೆ ಮರುದಿನ ಬೆಳಗ್ಗೆ ನಾಲ್ಕಕ್ಕೇ ವಾಪಸ್ಸು ಹೋಗಬೇಕಿರುವುದರಿಂದ ನಾಗೇಶನಿಗೆ ನೀನೆ ಪಿಕ್ ಮಾಡು ಎಂದಿದ್ದಳು.
ಹೀಗೆ ಬುಕ್ಕಿಂಗ್ ಇಲ್ಲದೆ ನಾಗೇಶ್ ಮರುದಿನ ಆಕೆಯನ್ನ ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಬಂದ ಹೀಗೆ ಬರುವಾಗ ಈಕೆ ಬಳಿ ಹಣ ಇರಬಹುದು ಎಂದು ಶಂಕಿಸಿ ಈಕೆಯನ್ನ ಕೊಲೆ ಮಾಡಿದ ಆದರೆ ಆರೋಪಿಗೆ ಆಕೆ ಬಳಿ ಸಿಕ್ಕಿದ್ದು ೫೦೦ ರೂಪಾಯಿ ಹಾಗೂ ಎರಡು ಮೊಬೈಲ್ ಪೋನ್ ಮಾತ್ರ. ಆದರೆ ಕೊಲೆಯನ್ನು ಮುಚ್ಚಿಡುವ ದೃಷ್ಟಿಯಿಂದ ಆತ ಆಕೆಯ ಎಲ್ಲ ದಾಖಲೆಗಳನ್ನು ಕೊಂಡೊಯ್ದು ನಾಶಪಡಿಸಿದ್ದ.
Comments are closed.