ಕರ್ನಾಟಕ

ಮಲೆನಾಡಿನಲ್ಲಿ ಮಳೆ ನಿಂತಿದೆ. ಆನೆ ಬಂತು!

Pinterest LinkedIn Tumblr


ಚಿಕ್ಕಮಗಳೂರು : ಕಳೆದೊಂದು ವಾರದಿಂದ ಸುರಿದ ಮಳೆಗೆ ಮಲೆನಾಡು ಜನರು ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ಇದೀಗ ಕಾಡಾನೆಗಳ ಕಾಟ ಎದುರಾಗಿದೆ.

ಶನಿವಾರ ಬೆಳ್ಳಂ ಬೆಳಗ್ಗೆ ಮೂಡಿಗೆರೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಕಾಡಾನೆಯೊಂದು ವಾಕಿಂಗ್ ಹೋಗುತ್ತಿರುವ ದ್ರಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ರಾಮದ ರಸ್ತೆಯಲ್ಲಿ ಯಾರ ಭಯವು ಇಲ್ಲದೆ ರಾಜ ಗಾಂಭೀರ್ಯದಿಂದ ಕಾಡಾನೆ ಹೆಜ್ಜೆ ಹಾಕಿದೆ.

ಬೆಳ್ಳೂರು ಗ್ರಾಮಸ್ಥರು ಬೆಳಿಗ್ಗೆ ಎದ್ದು ತುಂತುರು ಮಳೆ ಚುಮು ಚುಮು ಚಳಿಯಲ್ಲಿ ಕಾಫೀ ಹೀರುತ್ತಿದ್ದರೇ ಊರಿನ ನಾಯಿಗಳು ಬೊಗಳಲು ಆರಂಭಿಸಿವೆ. ಏಕೆ ನಾಯಿಗಳು ಇಷ್ಟೊಂದುಬೊಗಳುತ್ತೀವೆ ಎಂದು ಗ್ರಾಮಸ್ಥರು ಹೊರ ಬಂದು ನೋಡಿದರೆ ಕಾಡಾನೆಯೊಂದು ಬೆಳ್ಳಂ ಬೆಳಿಗ್ಗೆಯೇ ಊರಿನ ಮುಖ್ಯರಸ್ತೆಯಲ್ಲೇ ಆನೆಯೊಂದು ವಾಕಿಂಗ್ ಮಾಡುತ್ತಾ ಗೀಳಿಡುತ್ತಾ ಬರುತ್ತಿತ್ತು.

ಈ ದ್ರಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಮನೆಯ ಎರಡನೇ ಮಹಡಿಯಲ್ಲಿದ್ದ ವ್ಯಕ್ತಿಯೋರ್ವರು ಸೆರೆ ಹಿಡಿದಿದ್ದಾರೆ. ಒಂದು ಕಡೆ ಮಳೆಯಿಂದ ಆದ ಹಾನಿ ಮತ್ತೋಂದು ಕಡೆ ಕಾಡಾನೆ ಕಾಟದಿಂದ ಮಲೆನಾಡಿನ ಜನರು ಭಯಗೊಂಡಿದ್ದಾರೆ

Comments are closed.