ಕರ್ನಾಟಕ

ಸಾರ್ವಜನಿಕ ರಸ್ತೆಯಲ್ಲಿ ಲಾಂಗ್ ಹಿಡಿದು ಬರ್ತ್‌ಡೇ ಸೆಲೆಬ್ರೇಷನ್..!

Pinterest LinkedIn Tumblr


ಬೆಂಗಳೂರು: ಸಾರ್ವಜನಿಕರು ಓಡಾಡೋ ರಸ್ತೆಯನ್ನೇ ಪಾರ್ಟಿ ಹಾಲ್ ಮಾಡಿಕೊಂಡ ಪುಂಡನೊಬ್ಬ, ಮಾರುದ್ಧದ ಲಾಂಗಲ್ಲಿ ಕೇಕ್ ಕಟ್ಟಿಂಗ್ ಮಾಡಿ ದೊಡ್ಡ ಸುದ್ದಿಯಾಗಿದ್ದಾನೆ.

ಇದು ರಸ್ತೆ ಮಧ್ಯೆ ರಣ ಭೀಕರವಾಗಿ ನಡೀತಿದ್ದ ರೌಡಿಯೊಬ್ಬನ ಬರ್ತ್‌ಡೇ ಸೆಲಿಬ್ರೇಷನ್. ಕೇಕ್ ಕತ್ತರಿಸಿ ಲಾಂಗ್ ಹಿಡಿದು ರಸ್ತೆ ಮಧ್ಯೆ ನಿಂತು ಆತ ಅಬ್ಬರಿಸ್ತಿದ್ರೆ, ಅಲ್ಲಿ ಓಡಾಡ್ತಿದ್ದೋರೆಲ್ಲಾ ಭಯ ಭೀತರಾಗಿ ಅವನತ್ತ ನೋಡ್ತಿದ್ರು. ಅವನದೇ ಹುಡುಗರು ಬಾಸ್ ಅಂತ ಮರ್ಯಾದೆ ಕೊಡ್ತಿದ್ರೆ, ಪಾಪಚ್ಚಿ ಪೊಲೀಸರು ನೆಪಕ್ಕೂ ಹತ್ತಿರ ಹೋಗೋ ಧೈರ್ಯ ಮಾಡ್ಲಿಲ್ಲ.

ಅಂದಹಾಗೆ, ಇವನ ಹೆಸರು ದೀಪಕ್ ಅಲಿಯಾಸ್ ದೀಪಿ ಅಂತ. ಮಾಗಡಿ ರಸ್ತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್. ಆಟೋ ರಾಮ ಅನ್ನೋ ಮತ್ತೊಬ್ಬ ನಟೋರಿಯಸ್ ರೌಡಿಯ ಶಿಷ್ಯನಾಗಿರೋ ಈ ಪುಡಿ ರೌಡಿ ದೀಪುವಿನ ಹುಟ್ಟು ಹಬ್ಬದ ಆಚರಣೆಯ ದೃಶ್ಯಾವಳಿಗಳಿವು.

ಮೊನ್ನೆ 10 ನೇ ತಾರೀಕು ಈತನ ಹುಟ್ಟು ಹಬ್ಬ ಇತ್ತಂತೆ. 9 ನೇ ತಾರೀಕು ಇಡೀ ದಿನ ಫ್ರೆಂಡ್ಸ್ ಜೊತೆಗೆ ಕುಡಿದು ಕುಪ್ಪಳಿಸಿ, ಟೀಂ ಕಟ್ಟಿಕೊಂಡು ರೋಡ್ ರೋಡ್ ಅಲೆದು, ಕಡೆಗೆ ರಾತ್ರಿ 12 ಗಂಟೆ ಹೊತ್ತಿಗೆ ಹೆರೋಹಳ್ಳಿ ಕ್ರಾಸ್ ಬಳಿ ಮದ್ಯರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಸೀಟ್ ಮೇಲೆ ಕೇಕ್ ಇಟ್ಟು ಬರ್ತ್ ಡೇ ಮಾಡ್ಕೊಂಡಿದ್ದಾನೆ.

ನಿಂತ್ಕೊಳ್ಳೋಕ್ಕೂ ಮೈಯ್ಯಲ್ಲಿ ಶಕ್ತಿ ಇಲ್ಲದಷ್ಟು ಕುಡಿದು ಇಂಗ್ಲೀಷ್ ಅಕ್ಷರದಲ್ಲಿ ಬಾಸ್ ಅಂತ ಕೇಕ್ ಮಾಡಿಸಿ ಕತ್ತರಿಸಿದ್ದಾನೆ. ದುರಂತ ಅಂದ್ರೆ ಈ ಪುಂಡ ರೌಡಿಗಳ ಗುಂಪು ಬ್ಯಾಡರಹಳ್ಳಿ ಪೊಲೀಸರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ವಂತೆ. ಪೊಲೀಸರು ಕೂಡ ಇವರ ಕಡೆ ಅದ್ಯಾಕೋ ಏನೋ ನೆಪಕ್ಕೂ ಬರೋಲ್ವಂತೆ. ಹಾಗಾದ್ರೆ ಸಾರ್ವಜನಿಕರ ಗತಿಯೇನು..? ಸಭ್ಯರು ಸಂಭಾವಿತರೂ ಓಡಾಡೋದು ಇಂಥ ಪುಂಡ ಪೋಕರಿಗಳ ನಡುವೆ ಬದುಕೋದು ಹೇಗೆ ಅನ್ನೋದೆ ಯಕ್ಷ ಪ್ರಶ್ನೆ.

Comments are closed.