ಕರ್ನಾಟಕ

ಕೊಡಗು ಜನರ ರಕ್ಷಣೆಗೆ ನಿಂತ ಮೂವರು ಮಹಾಲಕ್ಷ್ಮೀಯರು!

Pinterest LinkedIn Tumblr


ಕೊಡಗಿನಲ್ಲಿ ಮತ್ತೆ ಭಾರೀ ಪ್ರಕೃತಿ ವಿಕೋಪ ಏರ್ಪಟಿದ್ದು ಮಹಾಮಳೆಗೆ ಕೊಡಗಿನ ಜನ ಅಕ್ಷರಶಃ ನಲುಗಿಹೋಗಿದ್ದಾರೆ. ಆದರೇ ಇಲ್ಲಿ ಜನರ ರಕ್ಷಣೆಗೆ ಹಾಗೂ ಪರಿಹಾರ ಕಾರ್ಯಕ್ಕೆ ಮೂವರು ಮಹಾಲಕ್ಷ್ಮೀಯರು ಕಣಕ್ಕಿಳಿದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಯಾರೀ ಮಹಾಲಕ್ಷ್ಮೀಯರು ಅಂದ್ರಾ ಈ ಸ್ಟೋರಿ ಓದಿ.

ಮಹಾಪ್ರವಾಹಕ್ಕೆ ತತ್ತರಿಸುತ್ತಿರುವ ಕೊಡಗನ್ನು ರಕ್ಷಿಸಲು ಮುಂದಾಗಿರೋದು ಮತ್ಯಾರೂ ಅಲ್ಲ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ, ಎಸ್ಪಿ ಡಾ ಸುಮನ್ ಡಿ ಪನ್ನೇಕರ್, ಜಿಪಂ CEO ಲಕ್ಷ್ಮಿಪ್ರಿಯ.

ಮಹಾಲಕ್ಷಿ ಹಬ್ಬದ ದಿನದಂದೇ ಈ ಮೂವರು ಮಹಾಲಕ್ಷ್ಮೀಯರು ಕೊಡಗಿನಲ್ಲಿ ಪರಿಹಾರ ಕಾರ್ಯಾಚರಣೆಗಿಳಿದಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿದ್ದು ಎಲ್ಲರಿಂದ ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 15 ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು. ಜಿಲ್ಲೆಯಲ್ಲಿ ಒಟ್ಟಾಗಿ 34 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 817 ಕುಟುಂಬಗಳ ಒಟ್ಟು 2866 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 247 ಜನರನ್ನು ಮತ್ತು 11 ಜಾನುವಾರಗಳನ್ನು ರಕ್ಷಿಸಲಾಗಿದೆ. ಹಾಗೂ ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ 300 ಕುಟುಂಬಗಳನ್ನು ರಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 07 ಜೀವಹಾನಿಯಾಗಿರುವ ಪ್ರಕರಣಗಳು ವರದಿಯಾಗಿದೆ.
ಈ ವಿಚಾರವನ್ನು ತಿಳಿದ ತಕ್ಷಣ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ, ಎಸ್ಪಿ ಡಾ ಸುಮನ್ ಡಿ ಪನ್ನೇಕರ್, ಜಿಪಂ CEO ಲಕ್ಷ್ಮಿಪ್ರಿಯ ಈ ಮೂವರು ಮಹಿಳಾ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಜನಮೆಚ್ಚೋ ಕೆಲಸ ಮಾಡುತ್ತಿದ್ದಾರೆ.

ಇತ್ತ ಕೊಡಗಿನಲ್ಲಿ ಈ ಮಹಿಳಾ ಅಧಿಕಾರಿಗಳು ನೆರೆ ಸಂತ್ರಸ್ಥರ ರಕ್ಷಣೆಗೆ ಈಗೆ ಹಗಲು ಇರುಳು ಶ್ರಮಿಸುತ್ತಿದ್ದಾರೆ. ಆದ್ರೆ ಅತ್ತ ಉತ್ತರ ಕರ್ನಾಟಕ ಡಿಸಿ, ಎಸ್ಪಿ, ಎಸಿ, ಸಿಇಒಗಳು ಮಾತ್ರ ಎಸಿ ರೂಂಗಳಲ್ಲೇ ಠಿಕಾಣಿ ಹೂಡಿದ್ದು, AC ರೂಂ ಗಳನ್ನು ಬಿಟ್ಟು ಹೊರಗಡೆ ಬಾರದೆ ಇರುವುದು ವಿಪರ್ಯಾಸ.

Comments are closed.