ಕರ್ನಾಟಕ

ಇತಿಹಾಸದಲ್ಲಿಯೇ ಕೃಷ್ಣಾ ನದಿ ಹಾಗೂ ಹಿಪ್ಪರಗಿ ಜಲಾಶಯದ ದಾಖಲೆ ನೀರು!

Pinterest LinkedIn Tumblr


ಬನಹಟ್ಟಿ : ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಈ ಭಾಗದಲ್ಲಿ ಪ್ರವಾಹವನ್ನು ಸೃಷ್ಠಿ ಮಾಡಿದೆ. ಕಳೆದ ಕೃಷ್ಣಾ ನದಿ ಹಾಗೂ ಹಿಪ್ಪರಗಿ ಜಲಾಶಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕ್ಯೂಸೆಕ್ಸ್ ನೀರು ಇಂದು ಹಿಪ್ಪರಗಿ ಜಲಾಶಯಕ್ಕೆ ಹರಿದು ಬಂದಿದ್ದು ಇದೊಂದು ಹೊಸ ದಾಖಲೆಯಾಗಿದೆ.

ಕೃಷ್ಣಾ ನದಿ ಹಾಗೂ ಹಿಪ್ಪರಗಿ ಜಲಾಶಯದ ಇತಿಹಾಸದಲ್ಲಿಯೇ ಶನಿವಾರ ದಾಖಲೆ ದಿನವಾಗಿದೆ. ಜಲಾಶಯ ಕಟ್ಟಲ್ಪಟ್ಟ ನಂತರ ಇದೇ ಮೊದಲಬಾರಿಗೆ 4 ಲಕ್ಷ 22 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಂದಿದ್ದು, ಜಲಾಶಯದಲ್ಲಿ ನೀರಿನ ಮಟ್ಟ 528.35 ರಷ್ಟಾಗಿದೆ. ದಿನಾಂಕ 9.8.2005ರಲ್ಲಿ 4ಲಕ್ಷ 20 ಸಾವಿರ ಕ್ಯೂಸೆಕ್ಸ್ ನೀರು ಬಂದಿತ್ತು. ಅಂದು ಜಲಾಶಯದ ನೀರಿನ ಮಟ್ಟ 528.33 ನಷ್ಟಿತ್ತು. ಇದೊಂದು ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಅಭಿಯಂತರರಾದ ವಿಠ್ಠಲ ನಾಯಕ ತಿಳಿಸಿದರು.

ಇದಕ್ಕೆ ಪುಷ್ಠಿ ನೀಡುವಂತೆ ನೇಕಾರ ನಗರ ರಬಕವಿಯ ಮುತ್ತೂರ ಗಲ್ಲಿಯಲ್ಲಿ ನೀರು ನುಗ್ಗಿದ್ದುಕಳೆದ 2005ಕ್ಕಿಂತಲೂ ಹೆಚ್ಚಿನ ಪ್ರವಾಹ ಸೃಷ್ಠಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

Comments are closed.