ಕರ್ನಾಟಕ

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಇರುವುದು ಯಾರಿಂದ ಗೊತ್ತಾ?

Pinterest LinkedIn Tumblr


ಚಿಕ್ಕೋಡಿ : ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಪ್ರವಾಹ ಪ್ರವಾಸ ರದ್ಧಾದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.

ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪ ಸಿಎಂ ಕುರ್ಚಿ ಹಿಡಿದಿರುವುದು ಕಾಗವಾಡ, ಅಥಣಿ, ಗೋಕಾಕ್​ ಹಾಗೂ ಅವರ ಬೆಂಬಲದಿಂದಾನೇ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ ಬಿಎಸ್​ ಯಡಿಯೂರಪ್ಪ ಅವರು ಆ ಕ್ಷೇತ್ರದ ಸಮಸ್ಯೆಯನ್ನೇ ನೋಡದ ಅವರು ಇನ್ಯಾವ ಕ್ಷೇತ್ರದ ಸಮಸ್ಯೆ ನೋಡುತ್ತಾರೆ ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ಹೇಳಿದರು.

ಬಿ.ಎಸ್​ ಯಡಿಯೂರಪ್ಪ ಅವರಿಗೆ ವಯಸ್ಸಿನ ಸಮಸ್ಯೆಯಾಗಿರಬಹುದು ಇನ್ನೂ ಸಚಿವ ಸಂಪುಟ ಇಲ್ಲ, ಸಮರ್ಪಕ ಅಧಿಕಾರಿಗಳು ಇದ್ದಾರೆ. ಅವರ ಸಲಹೆ ಪಡೆದು ಹಿಂದಿನ ಸರಕಾರದ ಕಡತಗಳು ಏನಿವೆ ಅವುಗಳನ್ನು ನೋಡಿ ರೈತರ ಎಲ್ಲ ಸಮಸ್ಯೆ ಪರಿಹಾರ ಮಾಡಲು ಕ್ರಮ ಕೈಗೊಳ್ಳಬೇಕು ಇಲ್ಲಿ ಪಕ್ಷದ ಸಮಸ್ಯೆ ಇಲ್ಲ, ಜನರ ರಕ್ಷಣೆ ಮಾಡುವುದು ಸರಕಾರದ ಜವಾಬ್ದಾರಿ ಎಂದರು.

ಸದ್ಯ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಪ್ರಯಣ ಬೆಳೆಸಿದ್ದಾರೆ. ಬಹುಶಃ ಆ ಭಾಗದ ಜನರ ಸ್ಪಂದಿಸಲು ಅವರು ಮೂರು ದಿನ ಪ್ರವಾಸ ಮಾಡಬಹುದು.

Comments are closed.