ಕರ್ನಾಟಕ

ಕೇರಳ, ಕರ್ನಾಟಕ, ತಮಿಳುನಾಡು ಜಲಪ್ರವಾಹ: 43 ಜನರ ಸಾವು; ಪರಿಹಾರ ಕೇಂದ್ರಗಳಿಗೆ 1.08 ಲಕ್ಷ ಜನ ಸ್ಥಳಾಂತರ

Pinterest LinkedIn Tumblr

ಬೆಂಗಳೂರು: ಕೇರಳ, ಕರ್ನಾಟಕ, ತಮಿಳುನಾಡು ಭಾಗಗಳಲ್ಲಿ ಉಂಟಾಗಿರುವ ಜಲಪ್ರವಾಹ ಸ್ಥಿತಿಗೆ ಸಿಲುಕಿ ಸಾವನ್ನಪ್ಪಿರುವವರ ಸಂಖ್ಯೆ 86 ಕ್ಕೆ ಏರಿಕೆಯಾಗಿದೆ. ಈ ವರೆಗೂ 1.08 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.

ವಯಾನಾಡ್ ನ ಉತ್ತರ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದ್ದು ಈ ಭಾಗದಲ್ಲಿ 29 ಜನರು ಸಾವನ್ನಪ್ಪಿದ್ದಾರೆ. ಇನ್ನು 2 ದಿನಗಳ ಹಿಂದೆ ನಾಪತ್ತೆಯಾಗಿದ್ದವರು ಈ ವರೆಗೂ ಪತ್ತೆಯಾಗಿಲ್ಲ. ಉತ್ತರ ಕರ್ನಾಟಕದಲ್ಲಿ ಕೃಷ್ಣ ನದಿಯಿಂದ 5.75 ಲಕ್ಷ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.

ಶುಕ್ರವಾರದವರೆಗೆ ರಾಜ್ಯದಲ್ಲಿ 10 ಜನರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಒಟ್ಟಾರೆ 22 ಜನರು ಸಾವನ್ನಪ್ಪಿದ್ದಾರೆ.

ಪ್ರವಾಹದಿಂದ ಜನರು ಆತಂಕಕ್ಕೊಳಗಾಗದಂತೆ ಯಡಿಯೂರಪ್ಪ ಮನವಿ
ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ಕಂಡು ಜನರು ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಯ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವೆಡೆ ಪ್ರವಾಹ ಪರಿಸ್ಥಿತಿ ಸಮೀಕ್ಷೆ ನಡೆಸಿ ಅವರು ತಡರಾತ್ರಿ ಬೆಂಗಳೂರಿಗೆ ಬಂದಿಳಿದರು.

ಶನಿವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ವಿಮಾನದಲ್ಲಿ ಬೆಳಗಾವಿ ಮತ್ತಿತ್ತರ ಭಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರದ ಹಣಕಾಸು ಸಚಿವರೇ ಬಂದಿರುವುದರಿಂದ ರಾಜ್ಯದಲ್ಲಿರುವ ನೈಜ ಸ್ಥಿತಿಗತಿ ಅವರಿಗೆ ತಿಳಿಯಲಿದೆ. ಬೆಳಗಾವಿ ಸೇರಿದಂತೆ ವಿವದೆಡೆ ಪರಿಶೀಲನೆ ನಡೆಸಿ ಇಂದು ಸಂಜೆಯೇ ಅವರು ದಹೆಲಿಗೆ ಹಿಂದಿರುಗಲಿದ್ದಾರೆ ಎಂದರು.

Comments are closed.