ಬೆಂಗಳೂರು: ವಿಕೃತ ಕಾಮಿಯೊಬ್ಬ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ತನ್ನ ಜೊತೆ ಕೆಲಸ ಮಾಡುತ್ತಿದ್ದ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ವಿಡಿಯೋ ಸೆರೆ ಹಿಡಿಯುತ್ತಿದ್ದು ಆತನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಆಕಾಶ್ ಶುಕ್ಲಾ ಬಂಧಿತ ಆರೋಪಿ. ಈತ ಮೂಲತ: ಉತ್ತರ ಪ್ರದೇಶದವನಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಕೆಲಸ ಮಾಡುತ್ತಿದ್ದನು. ಆದರೆ ವಿಕೃತ ಕಾಮಿ ಆಗಿರುವ ಆರೋಪಿ ಆಕಾಶ್ ಶುಕ್ಲಾ, ತನ್ನ ಮೊಬೈಲ್‍ನಲ್ಲಿ ಹಿಡನ್ ಕ್ಯಾಮೆರಾ ಅಪ್ಲಿಕೇಷನ್ ಡೌನ್ಲೌಡ್ ಮಾಡಿಕೊಂಡಿದ್ದನು. ನಂತರ ಆರೋಪಿ ಮಹಿಳೆಯರು ಕೂರುವ ಚೇರ್‌ಗಳ ಕೆಳಗೆ, ಡ್ರೆಸ್ಸಿಂಗ್ ರೂಂನಲ್ಲಿ ಹಾಗೂ ವಾಶ್ ರೂಂಗಳಲ್ಲಿ ಮೊಬೈಲ್ ನಲ್ಲಿ ಹಿಡನ್ ಕ್ಯಾಮೆರಾ ಆನ್ ಮಾಡಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದನು.
ಆರೋಪಿ ಆಕಾಶ್ ಶುಕ್ಲಾ ತನ್ನ ಮೊಬೈಲ್‍ನಲ್ಲಿ ಮಹಿಳೆಯರ ವಿಡಿಯೋ ಸೆರೆಹಿಡಿದ ನಂತರ ಅದನ್ನ ಲ್ಯಾಪ್ ಟಾಪ್‍ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದನು. ಬಳಿಕ ವೀಕೆಂಡ್‍ಗಳಲ್ಲಿ ಗೆಳೆಯರ ಜೊತೆ ಪಾರ್ಟಿಗೆ ತೆರಳುತ್ತಿದ್ದ ಆರೋಪಿ ಮಹಿಳೆಯರ ಅಶ್ಲೀಲ ಫೋಟೋ ವಿಡಿಯೋಗಳನ್ನು ಗೆಳೆಯರ ಜೊತೆ ನೋಡಿ ಖುಷಿಪಡುತ್ತಿದ್ದನು.
ಇತ್ತೀಚೆಗೆ ಕಂಪನಿಯ ಕೆಫೆಟೇರಿಯಾದಲ್ಲಿ ಇದೇ ರೀತಿ ಮೊಬೈಲ್‍ನಲ್ಲಿ ವಿಡಿಯೋ ಮಾಡಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಕಂಪನಿಯ ಮಹಿಳಾ ಸಿಬ್ಬಂದಿ ಆರೋಪಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಕಾಶ್ ಶುಕ್ಲಾ ಎಂಬಾತ ತನ್ನ ಸಹೋದ್ಯೋಗಿಗಳ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನ ಐಪಿಸಿ 354 (ಲೈಂಗಿಕ ಕಿರಕುಳ) ದ ಅಡಿಯಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
Comments are closed.