ಕರ್ನಾಟಕ

ಮಳೆಗೆ ಕೊಡಗಿನಲ್ಲಿ ಒಂದೇ ಮನೆಯ 4 ಮಂದಿ ಬಲಿ!

Pinterest LinkedIn Tumblr


ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು ಕಾವೇರಿ ನದಿಯು ಉಕ್ಕಿ ಹರಿಯುತ್ತಿದೆ. ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ನೋಡ ನೋಡುತ್ತಿದ್ದಂತೆ ಮನೆಗಳು ಕುಸಿಯುತ್ತಿವೆ. ಭಾಗಮಂಡಲ-ಮಡಿಕೇರಿ ಮಧ್ಯದ ಚೇರಂಗಾಲದಲ್ಲಿ ಗುಡ್ಡ ಕುಸಿದಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.

ಮನೆ ಮೇಲೆ ಗುಡ್ಡೆ ಕುಸಿದಿದ್ದರಿಂದ ಒಂದೇ ಮನೆಯ ನಾಲ್ವರು ಸಾವನ್ನಪ್ಪಿದ್ದರು, ಯಶ್ವಂತ್,ಬಾಲಕೃಷ್ಣ್, ಯಮುನ್ ,ಉದಯ ಸಾವನ್ನಪ್ಪಿದ್ದಾರೆ. ಮೂವರ ಶವಗಳು ಸಿಕ್ಕಿದ್ದು, ಮತ್ತಿಬ್ಬರಿಗಾಗಿ ಅವಶೇಷದಡಿ ಹುಡುಕಾಟ ಮಾಡಲಾಗ್ತಿದೆ. ಪ್ರವಾಹ ಪೀಡಿತ ಸ್ಥಳಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಕೆ.ಎಸ್​.ಈಶ್ವರಪ್ಪ, ವಿ.ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಹಲವರು ಭೇಟಿ ನೀಡಿ ಮಳೆ ಅನಾಹುತ ಪರಿಶೀಲನೆ ಮಾಡ್ತಿದ್ದಾರೆ. ಗುಡ್ಡು ಕುಸಿದು ಮೂವರು ಸಾವನ್ನಪ್ಪಿದ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಣೆ ಮಾಡಿದ್ದಾರೆ.

ಇನ್ನು ಮುರ್ನಾಡು, ನಾಪೋಕ್ಲು, ಚಟ್ಟಳ್ಳಿ ಇನ್ನು ಮುಂತಾದ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.. ಮೂರ್ನಾಡು ಸಮೀಪದ ಬೇತ್ರಿ ಕಾವೇರಿ ಹೊಳೆ ಸಂಪೂರ್ಣ ಭರ್ತಿಯಾಗಿದ್ದು, ಅಪಾಯ ಮಟ್ಟ ಮೀರಿ ಹರೀತಿದೆ.

Comments are closed.