ಕರ್ನಾಟಕ

ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೂಪರ್ ಪರ್ಫಾಮೆನ್ಸ್ -ಸುಮಲತಾ

Pinterest LinkedIn Tumblr


ಬೆಂಗಳೂರು: ಗುರುವಾರ ರಾತ್ರಿ ಸೆಲಬ್ರೆಟಿಗಳಿಗೋಸ್ಕರ ಕುರಕ್ಷೇತ್ರ ಚಿತ್ರದ ಪ್ರೀಮಿಯರ್​ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿನಿಮಾ ವೀಕ್ಷಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತುಂಬಾ ಖುಷಿಪಟ್ಟಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯುವಾಗಿ ಯುವನಟ ನಿಖಿಲ್ ಕುಮಾರಸ್ವಾಮಿ ಸೂಪರ್ ಸೂಪರ್ ಪರ್ಫಾಮೆನ್ಸ್ ಎಂದು ಸಂಸದೆ ಸುಮಲತಾ ಕೊಂಡಾಡಿದ್ದಾರೆ.

ಕುರುಕ್ಷೇತ್ರ ಎಂಬುದನ್ನು ಸಿನಿಮಾ ಎಂದರೆ ತಪ್ಪಾಗಲಿದೆ. ಅದೊಂದು‌ ಅನುಭವ ಮತ್ತು ಜರ್ನಿ. ದರ್ಶನ್‌ಗೆ ಸಂಗೊಳ್ಳಿ ರಾಯಣ್ಣ ಆದ ನಂತರ ಇದೊಂದು ಮೈಲಿಗಲ್ಲು. ದುರ್ಯೋಧನನೇ ದರ್ಶನ್, ದರ್ಶನ್ ಅವರೇ ದುರ್ಯೋಧನ. ಅಷ್ಟು ಕರಾರುವಕ್ಕಾಗಿ ಅವರು ನಟಿಸಿದ್ದಾರೆ ಎಂದು ದರ್ಶನ್​ ಅವರನ್ನು ಸುಮಲತಾ ಹೊಗಳಿದರು.

ಕರ್ನಾಟಕದ ಜನ 100 ವರ್ಷ ನೆನಪಿಸಿಕೊಳ್ಳುವಂತಹ ಸಿನಿಮಾ ಇದು. ಇದೊಂದು ನನಗೆ ಭಾವನಾತ್ಮಕ ಅನುಭವ, ಅಂಬರೀಶ್ ಅವರನ್ನು ಕೊನೆಭಾರಿಗೆ ಸ್ಕ್ರೀನ್ ನಲ್ಲಿ ನೋಡಿದ್ದು. ಮುನಿರತ್ನ ಅವರಿಗೆ ಥ್ಯಾಂಕ್ಸ್ ಹೇಳಬೇಕು ಏಕೆಂದರೆ ಅವರನ್ನು ಬಲವಂತಕ್ಕಾಗಿ ನಟಿಸುವಂತೆ ಮಾಡಿದರು ಎಂದರು.

ಮುನಿರತ್ನ ಅವರೇ ನಮ್ಮ ಮನೆಗೆ ಬಂದು ನಟಿಸಲೇ ಬೇಕು ಅಂತಾ ಉಪವಾಸ ಮಾಡಿ ಆ್ಯಕ್ಟ್ ಮಾಡಸಿದರು. ಸಿನಿಮಾದಲ್ಲಿ ಅರ್ಜುನ್ ಸರ್ಜಾರ ನಟನೆ ಕೂಡ ತುಂಬಾನೇ ಹೃದಯ ಸ್ಪರ್ಶಿಯಾಗಿದೆ. ಇನ್ನೂ ರವಿಚಂದ್ರನ್ ಸಹ ಉತ್ತಮವಾಗಿ ನಟಿಸಿದ್ದಾರೆ. ಇಡೀ ಚಿತ್ರ ಉತ್ತಮವಾಗಿದೆ. ಎಷ್ಟೇ ಭಾರಿ ನೋಡಿದರು ನೋಡಬೇಕು ಅನ್ಸೂತ್ತೆ. ದರ್ಶನ್ ಬರಿ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್ ಎಂದು ಕರಿಬೇಕು ಎಂಬ ಹೊಸ ಬೀರುದನ್ನು ಇದೇ ವೇಳೆ ದರ್ಶನ್​ ಅವರಿಗೆ ಸುಮಲತಾ ನೀಡಿದರು.

Comments are closed.