ಕರ್ನಾಟಕ

ಅಧಿಕಾರಕ್ಕೇರುತ್ತಿದ್ದಂತೆ ಬಯಲಾದ ಯಡಿಯೂರಪ್ಪ ಸರ್ಕಾರದ ಬಹುಕೋಟಿ ಗುಡ್ ರಿಚ್ ಹಗರಣ!!

Pinterest LinkedIn Tumblr


ಜಿಂದಾಲ್​ಗೆ ಭೂಮಿ ನೀಡೋದನ್ನು ವಿರೋಧಿಸಿ ಹೋರಾಟ ಮಾಡಿದ್ದ ಬಿಎಸ್ ಯಡಿಯೂರಪ್ಪ ಸಿಎಂ ಆದ ವಾರದಲ್ಲೇ ಅಮೆರಿಕ ಮೂಲದ ಕಂಪನಿಗೆ 250 ಕೋಟಿ ಮೌಲ್ಯದ ಭೂಮಿಯನ್ನು ರಾತ್ರೋರಾತ್ರಿ ತರಾತುರಿಯಲ್ಲಿ ನೀಡಿದ್ದಾರೆ.

ಅಮೆರಿಕ ಮೂಲದ ಬಹುರಾಷ್ಟ್ರೀಯ ವೈಮಾನಿಕ ಕಂಪನಿ ಗುಡ್​ರಿಚ್​ಗೆ ದೇವನಹಳ್ಳಿಯ ಏರೋಸ್ಪೇಸ್ SEZ ಪಾರ್ಕ್​​​ನ 25 ಎಕರೆ 1 ಗುಂಟೆ ಭೂಮಿಯನ್ನು ಎಕರೆಗೆ 2.50 ಕೋಟಿ ರೂಪಾಯಿಯಂತೆ ನೀಡಿದ್ದಾರೆ. ತಜ್ಞರ ವರದಿ ತರಿಸಿಕೊಳ್ಳದೇ, HLCC ಮೀಟಿಂಗ್ ಮಾಡದೇ, ಅಧಿಕಾರಿಗಳು ವಿರೋಧದ ನಡುವೆಯೂ 5 ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಭೂಮಿ ಮಂಜೂರು ಮಾಡಲಾಗಿದೆ.

ಸಂಪುಟ ರಚನೆ ಆಗೋವರೆಗೂ ಕಾಯದೇ ಭೂಮಿ ನೀಡಿದ್ದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಬಿಟಿವಿಗೆ ಸಿಕ್ಕ ಮಾಹಿತಿಗಳ ಪ್ರಕಾರ ಅಧಿಕಾರಿಗಳು ಈ ಪ್ರಾಜೆಕ್ಟ್​ಗೆ ಒಪ್ಪಿಲ್ಲ. ಈ ಭಾಗದಲ್ಲಿ 1 ಎಕರೆ ಭೂಮಿಯೇ 10 ಕೋಟಿ ರೂ.ನಷ್ಟು ಬೆಲೆ ಬಾಳುತ್ತೆ. ಆದರೆ ಸರ್ಕಾರ 2.50 ಕೋಟಿಗೆ ಭಾರೀ ಮೌಲ್ಯದ ಭೂಮಿ ಕೊಟ್ಟಿದೆ.

ಕರ್ನಾಟಕದ 20 ಸಂಸ್ಥೆಗಳು ಅರ್ಜಿ ಹಾಕಿ ಕಾಯುತ್ತಾ ಇದ್ದವು. ಕುಮಾರಸ್ವಾಮಿ ಸರ್ಕಾರ ಈ ಕಂಪನಿ ಸರಿಯಿಲ್ಲವೆಂದು ರಿಜೆಕ್ಟ್ ಮಾಡಿತ್ತು. ಆದ್ರೆ ಬಿಎಸ್​ವೈ ಮಾತ್ರ ಆತುರಾತುರವಾಗಿ ಭೂಮಿ ಮಂಜೂರು ಮಾಡಿದ್ದಾರೆ. ಜಿಂದಾಲ್​ಗೆ ಭೂಮಿ ಮಾರೋದನ್ನು ವಿರೋಧಿಸಿ​​​ 3 ದಿನ ಪೆಂಡಾಲ್​ ಹಾಕಿ ಧರಣಿ ಮಾಡಿದ್ದ ಆರ್​.ಅಶೋಕ್​, ಸಿಟಿರವಿ ಅವರಂತಹ ಬಿಜೆಪಿ ನಾಯಕರು ಈಗ ಏಕೆ ಸೈಲೆಂಟ್ ಆಗಿದ್ದಾರೆ. ಅನ್ನೋ ಪ್ರಶ್ನೆ ಎದುರಾಗ್ತಿದೆ.

Comments are closed.