ಮನೋರಂಜನೆ

ನೂತನ ಸಂಸದೆಯ ಹನಿಮೂನ್ ಪೋಟೋಸ್ ಬಯಲು!

Pinterest LinkedIn Tumblr


ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷದ ಪರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬೆಂಗಾಲಿ ಬೆಡಗಿ ನುಸ್ರತ್‌ ಜಹಾನ್‌ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಸಂಸತ್‌ಗೆ ಸಿಂಧೂರ ಇಟ್ಟುಕೊಂಡು ಬರುವ ಮೂಲಕ ಸಂಸತ್ ನಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಮೂಲಕ ಸಖತ್ ಸೌಂಡ್ ಮಾಡಿದ್ದರು. ಇನ್ನೂಇದೇ ವಿಚಾರವಾಗಿ ಮಾತನಾಡಿದ ನುಸ್ರತ್‌, ಜಾತಿ, ಪಂಥ ಮತ್ತು ಧರ್ಮವನ್ನು ಮೀರಿದ ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ ಎಂದು ಹೇಳಿದ್ದರು. ಇದೀಗಾ ನುಸ್ರತ್ ಜಹಾನ್ ಹನಿಮೂನ್ ಗೆ ಹೋಗುವ ಮೂಲಕ ಇನ್ನೊಮ್ಮೆ ಸುದ್ದಿಯಾಗಿದ್ದಾರೆ.

ಹೌದು ಕೆಲ ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಉದ್ಯಮಿ ನಿಖಿಲ್‌ ಜೈನ್‌ ಅವರೊಂದಿಗೆ ನುಸ್ರತ್ ಸಪ್ತಪದಿ ತುಳಿದಿದ್ದರು. ಸದ್ಯ ಹೊಸ ಬಾಳಿಗೆ ಕಾಲಿಟ್ಟಿರುವ ಈ ಜೋಡಿ ಹನಿಮೂನ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ನೂತನ ಸಂಸದೆ ನುಸ್ರತ್‌ ಜಹಾನ್‌ ಹಾಗೂ ಪತಿ ನಿಖಿಲ್‌ ಜೈನ್‌ ಅವರೊಂದಿಗೆ ಮಾಲ್ಡೀವ್ಸ್‌ಗೆ ಹನಿಮೂನ್ ಗಾಗಿ ತೆರಳಿದ್ದರು. ಸದ್ಯ ಸಿಂಧಾರಾ ದೂಜ್‌ ಆಚರಣೆ ಭಾಗವಾಗಿ ಫೋಟೊಗಳೊಂದಿಗೆ ತಮ್ಮ ಹನಿಮೂನ್‌ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಹನಿಮೂನ್ ಫೋಟೊಗಳನ್ನು ಶೇರ್ ಮಾಡಿಕೊಂಡಿರುವ ಈ ಜೋಡಿ ನಿಮ್ಮ ತಲೆಯನ್ನು ಮೋಡಗಳ ನಡುವೆ ಇಟ್ಟುಕೊಳ್ಳುವುದು ಮತ್ತು ನೀವು ಎಲ್ಲಿದ್ದೀರಿ ಎಂದು ತಿಳಿದುಕೊಳ್ಳುವುದು ಉತ್ತಮ. ಸ್ವರ್ಗವು ಎಂದಿಗೂ ಸ್ಥಳಗಳಲ್ಲಿ ಇರುವುದಿಲ್ಲ. ಬದಲಿಗೆ ನೀವಿರುವ ಕ್ಷಣಗಳಲ್ಲಿ, ಸಂಪರ್ಕದಲ್ಲಿ, ಸಮಯದ ಹೊಳಪಿನಲ್ಲಿದೆ ಎಂದು ನುಸ್ರತ್‌ ಹನಿಮೂನ್‌ ಫೋಟೊ ಶೇರ್‌ ಮಾಡಿ ಬರೆದುಕೊಂಡಿದ್ದಾರೆ.

Comments are closed.