ಕರ್ನಾಟಕ

ಅನರ್ಹ ಶಾಸಕರಿಗೆ ಬಿಜೆಪಿ ನಾಯಕರು ಕೊಟ್ಟ ಭರವಸೆ ಏನ್ ಗೊತ್ತಾ?

Pinterest LinkedIn Tumblr


ಬೆಂಗಳೂರು: 17 ಜನ ಅನರ್ಹ ಶಾಸಕರಿಗೆ ಈಗ ಅಭದ್ರತೆಯ ಭಯ ಕಾಡುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ, ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿ ಬರುತ್ತದೋ(?) ತೀರ್ಪು ನಮ್ಮವಿರುದ್ಧವಾಗಿ ಬಂದರೆ ಮುಂದೆ ಹೇಗೆ(?) ಎಂಬ ಹಲವು ಪ್ರಶ್ನೆಗಳು ಅವರ ಕಣ್ಮುಂದೆ ಇದೆ.

ಅಕಸ್ಮಾತ್​ ಬೈ ಎಲೆಕ್ಷನ್ ನಡೆದರೆ ಬಿಜೆಪಿ ನಮಗೆ ಬಿಜೆಪಿ ಟಿಕೆಟ್ ನೀಡುತ್ತಾ ಹೇಗೆ(?) ನಾವು ಅಲ್ಲಿಗೆ ಹೋದರೆ, ಅಲ್ಲಿರುವವರು ಸುಮ್ಮನಿರ್ತಾರಾ(?) ನಮಗೆ ಸಚಿವ ಸ್ಥಾನ ಸಿಗುತ್ತಾ ಇಲ್ವಾ(?) ಸುಪ್ರೀಂಕೋರ್ಟ್​ ವಿಚಾರಣೆ ಮುಂದಕ್ಕೆ ಹೋದರೆ ಏನ್ಮಾಡುವುದು(?) ಕೋರ್ಟ್ ಖರ್ಚು ವೆಚ್ಚಗಳನ್ನ ಅವರೇ ಭರಿಸ್ತಾರಾ(?) ಈ ಎಲ್ಲಾ ಅನುಮಾನಗಳ ಪ್ರಶ್ನೆಗಳು ಅನರ್ಹ ಶಾಸಕರಿಗೆ ಕಾಡುತ್ತಿವೆ.

ಹೀಗಾಗಿಯೇ ನಿನ್ನೆ ಗೋಕಾಕ್​ ಕ್ಷೇತ್ರದ ಅನರ್ಹ ಕಾಂಗ್ರೆಸ್​​ ರಮೇಶ್ ಜಾರಕಿಹೊಳಿ ಅವರ ಜೊತೆ ಅನರ್ಹರು ಸಮಸ್ಯೆ ಹಂಚಿಕೊಂಡಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಂದು ರಮೇಶ್ ಜಾರಕಿಹೊಳಿ ಅವರು ತಮ್ಮ ನಿವಾಸಕ್ಕೆ ಬರುವಂತೆ ಸೂಚನೆ ಕೊಟ್ಟಿದ್ದರು.

ಇತ್ತ ಸಿಎಂ ಬಿ.ಎಸ್ ಯಡಿಯೂರಪ್ಪನವರು ಪಿ.ಎ ಸಂತೋಷ್, ಸಿ.ಪಿ ಯೋಗೇಶ್ವರ್​ ಅವರು ಬರುವಂತೆ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಅನರ್ಹರು ನೇರವಾಗಿ ತಮಗೆ ಇರುವ ಸಂದೇಹಗಳನ್ನು ಬಿಜೆಪಿ ನಾಯಕರೊಟ್ಟಿಗೆ ಹೇಳಿಕೊಳ್ಳುವಂತೆ ಮಾಡಿದ್ದಾರೆ.

ಸದ್ಯ ಸಿ.ಪಿ ಯೋಗೇಶ್ವರ್​ ಅವರು ಅನರ್ಹ ಶಾಸಕರಿಗೆ ಸಂಪೂರ್ಣ ಭರವಸೆ ನೀಡಿದ್ದು, ಕೋರ್ಟ್ ಖರ್ಚು-ವೆಚ್ಚ ನೋಡಿಕೊಳ್ಳುವುದಲ್ಲದೇ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡುವ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ.

Comments are closed.