ಕರ್ನಾಟಕ

ಸ್ವಕ್ಷೇತ್ರದಲ್ಲಿ ದಿಢೀರ್ ಪ್ರತ್ಯಕ್ಷರಾದ ಅನರ್ಹ ಶಾಸಕ ಆರ್.ಶಂಕರ್

Pinterest LinkedIn Tumblr


ಹಾವೇರಿ: ಅನರ್ಹಗೊಂಡಿದ್ದ ಪಕ್ಷೇತರ ಶಾಸಕ ಆರ್.ಶಂಕರ್, ತಮ್ಮ ಸ್ವಕ್ಷೇತ್ರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬೀರೇಶ್ವರನಗರದ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಟಿವಿ5 ಜೊತೆ ರಾಜೀನಾಮೆ ನೀಡಿದ್ದರ ಬಗ್ಗೆ ಮಾತನಾಡಿದ್ದಾರೆ.

ರಾಜೀನಾಮೆ ನೀಡಿದ ಶಾಸಕರನ್ನ ಸ್ಪೀಕರ್ ಅನರ್ಹ ಮಾಡಿರುವುದು ಕಾನೂನು ಬಾಹಿರ, ಸ್ಪೀಕರ್ ಯಾವುದೇ ವಿಚಾರಣೆ ನಡೆಸದೇ ಅನರ್ಹಗೊಳಿಸಿದ್ದು ಸರಿಯಲ್ಲಾ ಎಂದು ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಅಲ್ಲದೇ, ನಮಗೆ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗಲಿದೆ. ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರು ಭಯಪಡಬೇಡಿ. ಕೆಲವರು ಯಾವ ಭ್ರಮೆಯಲ್ಲಿ ಉಪಚುನಾವಣೆ ತಯಾರಿ ನಡೆಸುತ್ತಿದ್ದಾರೋ. ಚುನಾವಣೆ ನಡೆಯಲ್ಲ. 2023ಕ್ಕೆ ಚುನಾವಣೆ ಬರಬಹುದು ಎಂದು ಪರೋಕ್ಷವಾಗಿ ಕೆ.ಬಿ.ಕೋಳಿವಾಡ ವಿರುದ್ಧ ಶಂಕರ್ ಕಿಡಿಕಾರಿದ್ದಾರೆ.

ತಾಲೂಕು ಅಭಿವೃದ್ಧಿ ನನ್ನ ಗುರಿ. 13ರಿಂದ 14 ಜನ ರಾಜೀನಾಮೆ ನೀಡಿದ ಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ಇದ್ದು ಪ್ರಯೋಜನ ಇಲ್ಲ. ನನ್ನ ನಿರ್ಧಾರ ತಾಲೂಕಿನ ಅಭಿವೃದ್ಧಿ ನನ್ನ ವಯಕ್ತಿಕ ಕೆಲಸಕ್ಕೆ ಅಲ್ಲ. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ. ನಮ್ಮ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಮನೆ ಮಗನಂತೆ ಕೆಲಸ ಮಾಡುವೆ. ಕಾರ್ಯಕರ್ತರು ಸ್ವತಂತ್ರರು ನಾನು ಎಲ್ಲಿ ಹೋದರು ಬರುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೆ ಒಬ್ಬ ಶಾಸಕ ಹೋದ್ರೆ ನಾನು ಇದ್ದು ಪ್ರಯೋಜನ ಇಲ್ಲ. ಸರ್ಕಾರ ಇದ್ದಾಗ ಕೆಲಸ ಮಾಡಲಿಲ್ಲ. ಸರ್ಕಾರ ಬಿದ್ದಾಗ ಯಾವ ಹುಚ್ಚನೂ ಇರೋಲ್ಲ ಎಂದು ಹೇಳಿದ್ದಾರೆ.

Comments are closed.