ಕರ್ನಾಟಕ

ಸ್ಪೀಕರ್​​ ಕ್ರಮ ಪ್ರಶ್ನಿಸಿ ಸುಪ್ರೀಂ​ ಮೆಟ್ಟಿಲೇರಿದ ಅಹರ್ನ ಶಾಸಕರು

Pinterest LinkedIn Tumblr


ಬೆಂಗಳೂರು(ಆಗಸ್ಟ್​​​.01): ಆಪರೇಷನ್​​ ಕಮಲಕ್ಕೊಳಗಾಗಿ ಅನರ್ಹಗೊಂಡ ಶಾಸಕರೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್​​ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಅನರ್ಹತೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್​​ಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್​ ಮತ್ತು ಜೆಡಿಎಸ್​ನ ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಹೆಚ್.ವಿಶ್ವನಾಥ, ನಾರಾಯಣಗೌಡ, ಪ್ರತಾಪಗೌಡ ಪಾಟೀಲ, ಮಹೇಶ ಕಮಠಳ್ಳಿ, ಗೋಪಾಲಯ್ಯ, ಎಂಟಿಬಿ ನಾಗರಾಜ್, ಕೆ. ಸುಧಾಕರ, ಭೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಮುನಿರತ್ನ, ಆರ್.ಶಂಕರ್, ಶ್ರೀಮಂತ ಪಾಟೀಲ್ ಸದ್ಯ ಸ್ಪೀಕರ್​​ ಕ್ರಮದ ವಿರುದ್ಧ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದವರು.

ಹಿಂದಿನ ಸ್ಪೀಕರ್​​ ರಮೇಶ್ ಕುಮಾರ್ ನೀಡಿರುವ ಆದೇಶವನ್ನು 9 ಶಾಸಕರು ಪ್ರಶ್ನೆ ಮಾಡಿದ್ದಾರೆ. ಇವರಲ್ಲಿ 6 ಜನ ಕಾಂಗ್ರೆಸ್‌, 3 ಜನ ಜೆಡಿಎಸ್‌ಗೆ ಸೇರಿದವರಾಗಿದ್ದಾರೆ. ಇನ್ನೂ ಆನಂದ ಸಿಂಗ್, ರೋಷನ್ ಬೇಗ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇವರು ಕೂಡ ಪ್ರತ್ಯೇಕವಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿದು ಬಂದಿದೆ.

ತಮ್ಮ ಅರ್ಜಿಯಲ್ಲಿ ಅನರ್ಹಗೊಳಿಸಿದ ಸ್ಪೀಕರ್ ನಿರ್ಣಯ ಮತ್ತೊಮ್ಮೆ ಅವಲೋಕಿಸಬೇಕು ಎಂದು ಉಲ್ಲೇಖ ಮಾಡಲಾಗಿದೆ. ರಾಜೀನಾಮೆ ಪತ್ರವನ್ನು ಸ್ಪೀಕರ್ ಯಾಕೇ? ತಿರಸ್ಕಾರ ಮಾಡಿದ್ದರು ಎಂದು ಪ್ರಶ್ನಿಸಬೇಕು. ಹಾಗೆಯೇ ಅನರ್ಹತೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

ಇತ್ತಿಚೆಗೆ ಮೊದಲು ಕಾಂಗ್ರೆಸ್​ನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಹಳ್ಳಿ, ರಾಣೇಬೆನ್ನೂರು ಶಾಸಕ ಆರ್. ಶಂಕರ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಈ ಬೆನ್ನಲ್ಲೇ ಉಳಿದ 14 ಶಾಸಕರನ್ನು ಕೂಡ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿದ್ದು ಕರ್ನಾಟಕದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Comments are closed.