ಕರ್ನಾಟಕ

ಎಸ್​ಎಂಕೆ ಅಳಿಯ ಕೋಟಿ ಕೋಟಿ ಸಾಲದ ಮಾಹಿತಿ​!!

Pinterest LinkedIn Tumblr


ನೂರಾರು ಕೋಟಿ ಉದ್ಯಮವನ್ನು ಹುಟ್ಟು ಹಾಕಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ ನಾಪತ್ತೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ಸಿದ್ದಾರ್ಥ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದ್ದರೇ, ಇನ್ನೊಂದೆಡೆ ಸಿದ್ದಾರ್ಥ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಅನುಮಾನಿಸಲಾಗುತ್ತಿದೆ. ಇದೇ ವೇಳೆ ಸಿದ್ದಾರ್ಥ ಅಪಾರ ಪ್ರಮಾಣದ ಸಾಲ ಹೊಂದಿದ್ದರು ಎಂಬ ಮಾತು ಕೇಳಿಬಂದಿದೆ.

ಹೌದು ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮ, ಸ್ಕೂಲ್, ಅನಾಥಾಶ್ರಮ, ಕಾಫಿ ಎಸ್ಟೇಟ್​ ಹೀಗೆ ಹಲವು ಬಗೆಯ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸಿದ್ದಾರ್ಥ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದರು. ಇಷ್ಟೇ ಅಲ್ಲ ಇತ್ತೀಚಿಗೆ ಉದ್ಯಮದಲ್ಲಿ ಸ್ವಲ್ಪ ಮಟ್ಟಿಗಿನ ಲಾಸ್​ ಮಾಡಿಕೊಂಡಿದ್ದ ಅಪಾರ ಪ್ರಮಾಣ ಸಾಲವನ್ನು ಹೊಂದಿದ್ದರು ಎನ್ನಲಾಗಿದೆ.

ಇನ್ನು ಬ್ಯುಸಿನೆಸ್​​ ಐಕಾನ್​ ಎಂದೇ ಕರೆಸಿಕೊಳ್ಳೋ ಸಿದ್ದಾರ್ಥ ಯಾವ ಯಾವ ಬ್ಯಾಂಕ್​ನಲ್ಲಿ ಎಷ್ಟು ಸಾಲ ಹೊಂದಿದ್ದರು ಎಂಬುದನ್ನು ಗಮನಿಸೋದಾದರೇ,
ಐಡಿಬಿಐ ಟ್ರಸ್ಟ್ ಶಿಪ್ ಸರ್ವಿಸಸ್ ಲಿಮಿಟೆಡ್- 4,475 ಕೋಟಿ ರೂ.
ಅಕ್ಸಿಸ್ ಟ್ರಸ್ಟೀ ಸರ್ವಿಸಸ್ ಲಿಮಿಟೆಡ್- 915 ಕೋಟಿ ರೂ.
ಅಕ್ಸಿಸ್ ಬ್ಯಾಂಕ್ ಲಿಮಿಟೆಡ್ -315 ಕೋಟಿ ರೂ.
ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್- 278 ಕೋಟಿ ರೂ.
ಯೆಸ್ ಬ್ಯಾಂಕ್ ಲಿಮಿಟೆಡ್ 273.63 ಕೋಟಿ ರೂ.
ಪಿರಾಮಳ್ ಟ್ರಸ್ಟ್ ಶಿಪ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 175 ಕೋಟಿ ರೂ.
ಆರ್ ಬಿ ಎಲ್ ಬ್ಯಾಂಕ್ ಲಿಮಿಟೆಡ್ 174 ಕೋಟಿ ರೂ.
ಇಸಿಎಲ್ ಫೈನಾನ್ಸ್ ಲಿಮಿಟೆಡ್ – 150 ಕೋಟಿ ರೂ.
ಸ್ಟಾಂಡರ್ಡ್ ಚಾರ್ಟರ್ಡ್ ಲೋನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್(ಇಂಡಿಯಾ) ಲಿಮಿಟೆಡ್- 150 ಕೋಟಿ ರೂ.
ಕ್ಲಿಕ್ಸ್ ಕ್ಯಾಪಿಟಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 150 ಕೋಟಿ ರೂ.
ಅಕ್ಸಿಸ್ ಫೈನಾನ್ಸ್ ಲಿಮಿಟೆಡ್ 125 ಕೋಟಿ ರೂ.
ಕೋಟಾಕ್ ಮಹಿಂದ್ರಾ ಇನ್ವೆಸ್ಟ್ ಲಿಮಿಟೆಡ್ – 125 ಕೋಟಿ ರೂ.
ಎ.ಕೆ.ಕ್ಯಾಪಿಟಲ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ -121 ಕೋಟಿ ರೂ.
ಎಸ್ ಟಿಸಿಐ ಫೈನಾನ್ಸ್ ಲಿಮಿಟೆಡ್ 100 ಕೋಟಿ ರೂ.
RABO ಇಂಡಿಯಾ ಫೈನಾನ್ಸ್ ಲಿಮಿಟೆಡ್ 80 ಕೋಟಿ ರೂ.
ಶಾಪೂರ್ಜಿ ಪಲ್ಲೊಂಜಿ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 80 ಕೋಟಿ ರೂ.
ವಿಸ್ತಾರಾ ಐಟಿಸಿಎಲ್ (ಇಂಡಿಯಾ) ಲಿಮಿಟೆಡ್ 75 ಕೋಟಿ ರೂ.
ರತನ್ ಇಂಡಿಯಾ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ.
ಕ್ಲಿಕ್ಸ್ ಫೈನಾನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ.
ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್ 50 ಕೋಟಿ ರೂ.
ಕೊಟಾಕ್ ಹೀಂದ್ರಾ ಪ್ರೈಮ್ ಲಿಮಿಟೆಡ್ 50 ಕೋಟಿ ರೂ.
ಐಎಫ್ ಸಿಐ ಲಿಮಿಟೆಡ್ 50 ಕೋಟಿ ರೂ.
ಬಜಾಜ್ ಫೈನಾನ್ಸ್ ಲಿಮಿಟೆಡ್ 45 ಕೋಟಿ ರೂ.
ಎಡೆಲ್ವೆಸ್ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ 25 ಕೋಟಿ ರೂ.
ಒಟ್ಟು ಸಾಲದ ಮೊತ್ತ 8,082.63 ಕೋಟಿ ರೂ.

ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ಹಾಗೂ ವಿದೇಶದಲ್ಲೂ ಸಿದ್ದಾರ್ಥ ಸಾಲ ಪಡೆದುಕೊಂಡಿದ್ದು, ಇದೇ ಕಾರಣಕ್ಕೆ ಸಿದ್ದಾರ್ಥ ಹೆದರಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸ್ಥಿತಿ ತಲುಪಿದ್ರಾ ಎಂಬ ಪ್ರಶ್ನೆ ಮೂಡಿದ್ದು, ತನಿಖಾ ತಂಡ ಇದಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ನಡೆಸಿದೆ.

Comments are closed.