ಕೋಟಿ ಕೋಟಿ ಆಸ್ತಿ ಒಡೆಯ , ಕಾಫಿ ಡೇ ಮಾಲೀಕ ವಿ.ಜಿ.ಸಿದ್ದಾರ್ಥ ನಾಪತ್ತೆ ಪ್ರಕರಣಕ್ಕೆ ಹೊಸತೊಂದು ಟ್ವಿಸ್ಟ್ ಸಿಕ್ಕಿದೆ. ಹೌದು ಸಿದ್ದಾರ್ಥ ಇತ್ತೀಚಿನ ದಿನಗಳಲ್ಲಿ ಸಮಸ್ಯೆಯೊಂದರಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದ್ದು, ಈ ವಿಚಾರವನ್ನು ಗುರೂಜಿಯೊಬ್ಬರು ಎಸ್ಎಂಕೆ ಕುಟುಂಬಕ್ಕೆ ಮೊದಲೇ ತಿಳಿಸಿದ್ದರು.
ಹೌದು ಸಿದ್ದಾರ್ಥ ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರು ಎಂಬುದು ಎಸ್ಎಂಕೆ ಕುಟುಂಬಕ್ಕೆ ಗೊತ್ತಿತ್ತು. ಹೀಗಾಗಿ ಸಿದ್ದಾರ್ಥ ಕುಟುಂಬ ಅಂದ್ರೆ ಸಿದ್ದಾರ್ಥ ಅತ್ತೆ ಎಸ್ಎಂಕೆ ಪತ್ನಿ ಪ್ರೇಮಾ ಹಾಗೂ ಸಿದ್ದಾರ್ಥ ಪುತ್ರ ಅಮೃರ್ಥ್ಯ ಆಧ್ಯಾತ್ಮಿಕ ಚಿಂತಕ ಹಾಗೂ ಅವಧೂತ ವಿನಯ್ ಗುರೂಜಿಯವರನ್ನು ಭೇಟಿ ಮಾಡಿದ್ದರಂತೆ.
ಈ ವೇಳೆ ವಿನಯ್ ಗುರೂಜಿ, ನಿಮ್ಮ ತಂದೆ ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರನ್ನು ಹುಶಾರಾಗಿ ನೋಡಿಕೋ ಎಂದು ಗುರೂಜಿ, ಅವರ ಪುತ್ರ ಅಮರ್ಥ್ಯರಿಗೆ ಹೇಳಿದ್ದರು ಎನ್ನಲಾಗಿದೆ. ಇದೀಗ ಸಿದ್ದಾರ್ಥ ನಾಪತ್ತೆಯಾದ ಬಳಿಕ ಮತ್ತೆ ಎಸ್ಎಂಕೆ ಪತ್ನಿ ಪ್ರೇಮಾ ಮತ್ತೊಮ್ಮೆ ಗುರೂಜಿಗೆ ಕರೆ ಮಾಡಿದ್ದು, ಈ ವೇಳೆ ನನಗೆ ನೀರಷ್ಟೇ ಕಾಣ್ತಿದೆ ಎಂದು ಗುರೂಜಿ ಜಲಕಂಟಕದ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಸಿದ್ದಾರ್ಥ ನಾಪತ್ತೆ ಪ್ರಕರಣ ಕುತೂಹಲ ಮೂಡಿಸುತ್ತಿದ್ದು, ನಿಜವಾಗಿಯೂ ಸಿದ್ದಾರ್ಥ ಆತ್ಮಹತ್ಯೆಗೆ ಶರಣಾಗಿದ್ದಾರಾ? ಅಥವಾ ಅವರನ್ನು ಯಾರನ್ನಾದರೂ ಅಪಹರಿಸಿದ್ದಾರಾ? ಎಂಬ ಅನುಮಾನಗಳು ಸೃಷ್ಟಿಯಾಗಿವೆ.
Comments are closed.