ಕರ್ನಾಟಕ

ಸಿದ್ಧಾರ್ಥ ನನ್ನೂರಿನವರು, ನಾವು ಮಕ್ಕಳಿಗೆ ರೋಲ್ ಮಾಡೆಲ್ ಎನ್ನುತ್ತಿದ್ದೆವು – ಸಿ .ಟಿ ರವಿ

Pinterest LinkedIn Tumblr


ಬೆಂಗಳೂರು: ಸಿದ್ಧಾರ್ಥ ನನ್ನೂರಿನವರು, ನಾವು ಮಕ್ಕಳಿಗೆ ರೋಲ್ ಮಾಡೆಲ್ ಎನ್ನುತ್ತಿದ್ದೆವು ಎಂದು ಮಾಜಿ ಸಚಿವ ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.

ಆಸ್ತಿಗಿಂತ ಸಾಲ ಇರೋದು ಸಹಜ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಿದ್ದಾರ್ಥ ಇಂಗ್ಲಿಷ್ ಕೂಡ ಬಾರದವರಿಗೆ ಸಾಕಷ್ಟು ತರಬೇತಿ ನೀಡಿ ಉದ್ಯೋಗ ನೀಡಿದರು. ಅವರು ಮಾಡಿದ ಆಸ್ತಿಗಿಂತ ಸಾಲ ಇರೋದು ಸಹಜ. ಆದರೆ ಅವರು ಬದುಕಿ ಬರಲಿ ಎಂಬುದು ನಮ್ಮ ಹಾರೈಕೆ ಎಂದು ಸಿ.ಟಿ.ರವಿ ಹೇಳಿದರು.

ನಿಗೂಢ ಕಣ್ಮರೆ ಆಶ್ಚರ್ಯ ಹಾಗೂ ಆಘಾತ ಉಂಟು ಮಾಡಿದೆ

ಕಳೆದ ಮುವತ್ತು ವರ್ಷದಿಂದ ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರಿಗೊಂದು ಕನಸಿತ್ತು ಚಿಕ್ಕಮಗಳೂರಿನಲ್ಲಿ ಕೃಷ್ಣ ಹೆಸರಲ್ಲಿ ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆಯಬೇಕು. ಹಾಗೂ ಕೆಎಎಸ್, ಐಎಎಸ್ ತರಬೇತಿ ನೀಡುವ ಕನಸಿತ್ತು ಎಂದುಕೊಂಡಿದ್ದರು. ಇದೀಗ ಅವರ ನಿಗೂಢ ಕಣ್ಮರೆ ಆಶ್ಚರ್ಯ ಹಾಗೂ ಆಘಾತ ಉಂಟು ಮಾಡಿದೆ ಎಂದು ಸಿ.ಟಿ ರವಿ ತಿಳಿಸಿದರು.

Comments are closed.