ಕರ್ನಾಟಕ

ಮುಖ್ಯಮಂತ್ರಿ ಯಡಿಯೂರ್ಪ ಘೋಷಿತ ಆಸ್ತಿ ಎಷ್ಟು?! ಇಲ್ಲಿದೆ ವಿವರ!!

Pinterest LinkedIn Tumblr


ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಅಧಿಕಾರದ ಗದ್ದುಗೆ ಹಿಡಿದ ಬಿಎಸ್​ವೈ ರಾಜಕೀಯ ಬದುಕು ಅತ್ಯಂತ ರೋಚಕ ಹಾಗೂ ಛಲದಿಂದ ಕೂಡಿದೆ. ಸತತ 40 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಬಿಎಸ್​ವೈ ಈಗಾಗಲೇ ಮೂರು ಬಾರಿ ಸಿಎಂ ಪಟ್ಟಕ್ಕೇರಿದವರು. ಹೀಗೆ ಹಲವು ಬಾರಿ ಸಿಎಂ ಪಟ್ಟಕ್ಕೇರಿದ ಬಿಎಸ್​ವೈ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್​!

ಸಿಎಂ ಬಿಎಸ್​ವೈಯವರ ಘೋಷಿತ ಆಸ್ತಿ ಅಂದಾಜು 7 ಕೋಟಿ ರೂಪಾಯಿ. ಇದು 2018 ರ ಚುನಾವಣೆ ವೇಳೆಯಲ್ಲಿ ಚುನಾವಣಾ ಆಯೋಗಕ್ಕೆ ದಾಖಲೆಯೊಂದಿಗೆ ಸಲ್ಲಿಕೆಯಾಗಿದೆ. ಇದರಲ್ಲಿ ಸ್ಥಿರ,ಚರ,ವಾಹನ,ಚಿನ್ನಾಭರಣ ಹಾಗೂ ನಗದು ಸೇರಿದೆ.

ಬಿಎಸ್​ವೈ ಬಳಿ ಶಿಕಾರಿಪುರದಲ್ಲಿ 2 ಮನೆಗಳಿದ್ದು, ಒಂದು ಮನೆ ಪತ್ನಿ ಮೈತ್ರಾದೇವಿಯವರಿಂದ ಕೊಡುಗೆಯಾಗಿ ಬಂದಿದ್ದು, ಇನ್ನೊಂದು ಸ್ವಯಾರ್ಜಿತ. ಇದಲ್ಲದೇ ಬೆಂಗಳೂರಿನ ಆರ್​ಎಂವಿ ಬಡಾವಣೆಯಲ್ಲಿ ಒಂದು ನಿವಾಸ ಹೊಂದಿರುವ ಬಿಎಸ್​ವೈ, ಬೆಂಗಳೂರಿನಲ್ಲಿ 65 X 85 ಬಿಡಿಎ ನಿವೇಶನ, ತಿರುಮಲಾಪುರದಲ್ಲಿ 5.02 ಎಕರೆ ಕೃಷಿ ಭೂಮಿ, ಚನ್ನಹಳ್ಳಿ 4.10 ಎಕರೆ ಕೃಷಿ ಭೂಮಿ, ಶಿರಾಳಕೊಪ್ಪದಲ್ಲಿ ಕೈಗಾರಿಕಾ ಉದ್ದೇಶದಿಂದ 9.12 ಎಕರೆ ಭೂಮಿ ಖರೀದಿಸಿದ್ದಾರೆ.

ಶಿಕಾರಿಪುರದ ಕೆನರಾ ಬ್ಯಾಂಕ್ ನಲ್ಲಿ 2,19,636 ರು ಹಣ ಹೊಂದಿರುವ ಬಿಎಸ್​ವೈ ಶಿವ ಸಹಕಾರಿ ಬ್ಯಾಂಕ್ ನಲ್ಲಿ 20 ಸಾವಿರ ಠೇವಣಿ , ಅಪೆಕ್ಸ್ ಬ್ಯಾಂಕ್ ವಿಧಾನಸೌಧ ಶಾಖೆಯಲ್ಲಿ 17 ಲಕ್ಷ 25ಸಾವಿರ 131 ರುಪಾಯಿಗಳು, ಸಾಫ್ಟ್ ವೇರ್ ಟೆಕ್ ಗ್ರೂಪ್ ನಲ್ಲಿ 100 ಷೇರುಗಳು, ಜೆನಿತ್ ಇನ್ಫೋಟೆಕ್ ನಲ್ಲಿ 50 ಷೇರುಗಳು, ಖೇತಾನ್ ಲಿಮಿಟೆಡ್ ನಲ್ಲಿ 70 ಷೇರುಗಳು, ಶಿಕಾರಿಪುರ ಅರ್ಬನ್ ಬ್ಯಾಂಕ್ 100 ಷೇರುಗಳನ್ನು ಹೊಂದಿದ್ದಾರೆ.

ಬರೋಬ್ಬರಿ 3 ಕೆಜಿಯಷ್ಟು ಚಿನ್ನಾಭರಣ ಹೊಂದಿರುವ ಯಡಿಯೂರಪ್ಪ 76 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ಹೊಂದಿದ್ದಾರೆ. ಎಲ್ ಐಸಿ 1.72 ಲಕ್ಷ, ಬಿಎಸ್ ಎನ್ ಎಲ್ ನಿಂದ ಪಿಂಚಣಿ , 10 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತು, ಒಂದು ಕಾಂಟೆಸ್ಸಾ ಮತ್ತು ಇನ್ನೊಂದು ಸ್ಕಾರ್ಪಿಯೋ ಕಾರು ಹೊಂದಿದ್ದಾರೆ.

ಬಿಎಸ್​ವೈ 2013 ರ ವೇಳೆ 5.96 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು. ಬಳಿಕ 014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 6.97 ಕೋಟಿ ರು ಎಂದು ಅಫಿಡವಿಟ್ ಸಲ್ಲಿಸಿದ್ದರು. 2018ರ ಘೋಷಿತ ಪ್ರಮಾಣ ಪತ್ರದ ವಿವರಗಳನ್ನು ನೋಡಿದ್ದಾಗ ಅವರ ಬಳಿ 4.85 ಕೋಟಿ ರೂ. ಸ್ಥಿರಾಸ್ತಿ, 71.30 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಕಳೆದ 10 ವರ್ಷಗಳಿಂದ ಬಿಎಸ್​ವೈ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ ಅನ್ನೋದು ಗಮನಿಸಬೇಕಾದ ಸಂಗತಿ.

Comments are closed.