ಕರ್ನಾಟಕ

ಅತೃಪ್ತ ಶಾಸಕರು ಚಕ್ಕಗಳ ರೀತಿಯಲ್ಲಿ ಕುಳಿತಿದ್ದಾರೆ

Pinterest LinkedIn Tumblr


ಕಾರವಾರ: ಅತೃಪ್ತ ಶಾಸಕರು ಚಕ್ಕಗಳ ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹೇಳಿಕೆ ನೀಡಿರುವ ಅವರು, ಅನರ್ಹ ಅತೃಪ್ತ ಶಾಸಕರು ಗಂಡಸ್ಥನ‌ ‌ಇದ್ದರೆ ಸದನಕ್ಕೆ ಬಂದು ವಿರುದ್ದ ಮತ ಹಾಕಬೇಕಿತ್ತು. ಚಕ್ಕ‌ಗಳ ‌ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ ಅಂತಾ ಪ್ರಶ್ನೆ ಮಾಡಿದ್ದಾರೆ.ಈ ನಿಟ್ಟಿನಲ್ಲಿ ಸ್ಪೀಕರ್ ಸರಿಯಾದ ಕ್ರಮವನ್ನೇ ಅನುಸರಿಸಿದ್ದಾರೆ ಎಂದರು.

ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ 17 ಅತೃಪ್ತ ಶಾಸಕರನ್ನು ಅನರ್ಹ ಮಾಡಿರುವ ಸ್ಪೀಕರ್ ಕ್ರಮ ಸರಿಯಾದದ್ದೇ ಆಗಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಸುಪ್ರೀಂ ಕೋರ್ಟ್ ನಲ್ಲಿ ಶಾಸಕರ ಅನರ್ಹತೆ ತಡೆ ಹಿಡಿಯುವ ಸಾಧ್ಯತೆ ಕಡಿಮೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮನ್ನು ಅನರ್ಹ ಮಾಡಲಾಗಿತ್ತು ಆಗ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿದ್ದೆವು ನೋಟಿಸ್ ನೀಡದೆ ಅನರ್ಹತೆ ಮಾಡಿದ್ದಾರೆ ಅನ್ನುವ ಒಂದೇ ಕಾರಣಕ್ಕೆ ನಮ್ಮ ಅನರ್ಹತೆ ರದ್ದಾಗಿತ್ತು. ಆದರೆ ಈಗಿನ ಅನರ್ಹ ಶಾಸಕರಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಕರೆಯಲಾಗಿದೆ ಅಲ್ಲದೇ ವಿಶ್ವಾಸಮತ ಯಾಚನೆ ಸಂಧರ್ಭದಲೂ ಬರದೇ ಸರ್ಕಾರದ ವಿರುದ್ದ ನಾವಿದ್ದೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದರು.

ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿಯಲಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

Comments are closed.