ಕರ್ನಾಟಕ

ಇನ್ನು 6 ತಿಂಗಳು ಯಡಿಯೂರಪ್ಪ ಸರ್ಕಾರ ಸೇಫ್

Pinterest LinkedIn Tumblr


ವಿಧಾನಸಭೆ: ಸಿಎಂ ಯಡಿಯೂರಪ್ಪ ವಿಶ್ವಾಸಮತಯಾಚನೆ ಮಾಡಿದ್ದು, ಇನ್ನು 6 ತಿಂಗಳು ಯಡಿಯೂರಪ್ಪ ಸರ್ಕಾರ ಸೇಫ್ ಆಗಿರಲಿದೆ. ಈ ವೇಳೆ ಮಾತನಾಡಿದ ಬಿಎಸ್‌ವೈ, ದ್ವೇಷದ ರಾಜಕಾರಣವನ್ನ ನಾನು ಮಾಡಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಮತ್ತೊಮ್ಮೆ ಸಿಎಂ ಆಗುವ ಅವಕಾಶ ಸಿಕ್ಕಿದೆ. ಇದು ನಾಡಿನ ಜನರಿಗೆ ಸಿಕ್ಕಿರುವ ಗೌರವೂ ಆಗಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗ ಇಬ್ಬರೂ ಸೇಡಿನ ರಾಜಕಾರಣ ಮಾಡಿಲ್ಲ. ನನ್ನದು ಅಭಿವೃದ್ಧಿ ಮಂತ್ರ. ದ್ವೇಷದ ರಾಜಕಾರಣವನ್ನ ನಾನು ಮಾಡಲ್ಲ. ನನ್ನನ್ನ ವಿರೋಧಿಸಿದರೂ ನಾನು ದ್ವೇಷ ಸಾಧಿಸಲ್ಲ ಎಂದು ಹೇಳಿದ್ದಾರೆ.

ನಾಡಿನ ಜನ ಮೆಚ್ಚುವ ರೀತಿ ಅಧಿಕಾರ ನಡೆಸುತ್ತೇನೆ. ಜನರ ಹಿತಕ್ಕೆ ಧಕ್ಕೆಯಾದರೆ ಸರಿಪಡಿಸುತ್ತೇನೆ. ನಾನು ನನ್ನ ಹೋರಾಟದ ಬಗ್ಗೆ ಮಾತನಾಡಲ್ಲ. ವಿಶೇಷ ಕಾರಣಕ್ಕೆ ಮುಖ್ಯಮಂತ್ರಿಯಾಗಿದ್ದೇನೆ. 3 ವರ್ಷ 10 ತಿಂಗಳು ಅಧಿಕಾರ ನಡೆಸುತ್ತೇನೆ. ನಂಬಿಕೆ, ವಿಶ್ವಾಸ ದ್ರೋಹ ಮಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Comments are closed.