ಕರ್ನಾಟಕ

ಹೆಂಡತಿ ಅಡುಗೆ ಮಾಡಿ ಎಂದರೆ ಮಹೀಂದ್ರಾ ಕಂಪನಿ ಅಧ್ಯಕ್ಷ ಏನ್ ಹೇಳಿದ್ರು ಗೊತ್ತಾ..?

Pinterest LinkedIn Tumblr


ಮಹೀಂದ್ರಾ ಗ್ರೂಪ್ ಆಫ್ ಕಂಪನಿಯ ಚೇರ್‌ಮೆನ್ ಆನಂದ್ ಮಹೀಂದ್ರಾಗೆ ಅವರ ಪತ್ನಿ ಅಡುಗೆ ಮಾಡಲು ಹೇಳಿದ್ದು, ಇದಕ್ಕೆ ಟ್ವಿಟ್ಟರ್ ಮೂಲಕ ಆನಂದ್ ಮಹೀಂದ್ರಾ ಫನ್ನಿಯಾಗಿ ರಿಪ್ಲೈ ಕೊಟ್ಟಿದ್ದಾರೆ.

ತುಂತುರು ಮಳೆ ಬೀಳುತ್ತಿದ್ದ ಸಮಯದಲ್ಲಿ ಆನಂದ್ ಮಹೀಂದ್ರಾ ಸೇರಿ ಮನೆ ಜನರೆಲ್ಲ ಒಟ್ಟಿಗೆ ಇದ್ದಿದ್ದು, ಆನಂದ್ ಪತ್ನಿ ಅನುರಾಧಾ, ತಮ್ಮ ಪತಿಗೆ ಯಾವುದಾದರೂ ಒಳ್ಳೆಯ ಅಡುಗೆ ಮಾಡಲು ಹೇಳಿದ್ದು, ಅದಕ್ಕೆ ಟ್ವಿಟ್ಟರ್ ಮೂಲಕ ರಿಪ್ಲೈ ಕೊಟ್ಟ ಆನಂದ್, ಚಪಾತಿಯನ್ನ ಐರನ್ ಮಾಡುತ್ತಿರುವ ಯುವಕನ ಫೋಟೋ ಹಾಕಿ, ನನ್ನ ಅಡುಗೆ ಹೀಗೆ ಇರುತ್ತದೆ ಎಂದು ಹಾಸ್ಯಭರಿತವಾಗಿ ಟ್ವಿಟ್ಟರ್ ಪೋಸ್ಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾರ ಈ ಟ್ವೀಟ್ 18 ಸಾವಿರ ಲೈಕ್ಸ್ ಪಡೆದುಕೊಂಡಿದ್ದು, ನೂರಕ್ಕೂ ಅಧಿಕ ಜನ ಕಮೆಂಟ್ ಮಾಡಿದ್ದಾರೆ.

Comments are closed.