ತುಮಕೂರು: ತುಮಕೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ.
ನಾನು ಭ್ರಷ್ಟಾಚಾರ ಮಾಡಿಲ್ಲಾ ಕಾನೂನು ಮೀರಿಲ್ಲಾ. ಒಂದು ವೇಳೆ ಕಾನೂನು ಮೀರಿದ್ರೆ ಅದು ರೈತರಿಗೆ ಅನುಕೂಲವಾಗಿದೆ. ನಾನು ಅಧ್ಯಕ್ಷನಾಗಿ ಮೊದಲ ಬಾರಿಗೆ ಬಂದಾಗ 3 ಕೋಟಿ ಇತ್ತು. ಈಗ 1 ಸಾವಿರ ರೂ.ಕೋಟಿ ಡೆಪಾಸಿಟ್ ಇದೆ. ಸೋಮವಾರ ಸರ್ಕಾರ ಹೋದರೆ ಮೂರು ದಿನದಲ್ಲಿ ಆರ್ಡರ್ ಮಾಡಿಸಿಕೊಂಡು ಬರುತ್ತೇನೆ. ನನ್ನ ಮೇಲೆ ರಾಜಕೀಯದಿಂದ ಏನನ್ನೂ ಸಾಧಿಸಲು ಆಗೋದಿಲ್ಲಾ ಎಂದಿದ್ದಾರೆ.
ಒಂದು ಗಂಟೆ ಹೆಚ್ಚು ಕೆಲಸ ಮಾಡಿ
ರಿಸರ್ವ್ ಬ್ಯಾಂಕ್ ಅನುಮತಿ ಪಡೆಯದೇ ರಾಜಕೀಯ ಆದೇಶದಿಂದ ಮಾಡಲಾಗಿದೆ. ರಾಜಕೀಯವಾಗಿಯೇ ಉತ್ತರ ಕೊಡ್ತೀನಿ. ಒಂದು ವಾರದಲ್ಲೇ ಮತ್ತೆ ಕಮಿಟಿ ರಚನೆ ಮಾಡಿ ತೋರಿಸ್ತೇನೆ. ಯಾರು ಬೀದಿಗೆ ಇಳಿದು ಹೋರಾಟ ಮಾಡಬೇಡಿ. ಸಿಬ್ಬಂದಿಗಳು ಒಂದು ಗಂಟೆ ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ನಿಮ್ಮ ಪ್ರತಿಭಟನೆ ಮಾಡಿ ಎಂದು ಮಾಜಿ ಶಾಸಕ ರಾಜಣ್ಣ ಕರೆಕೊಟ್ಟಿದ್ದಾರೆ.
ರಾಜಕೀಯ ನಿವೃತ್ತಿ ಘೋಷಿಸಿದ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್.ರಾಜಣ್ಣ
ಇದೇ ವೇಳೆ ಮಾತನಾಡಿದ ರಾಜಣ್ಣ, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ಚುನಾವಣೆಗೆ ನಿಲ್ತೀನಿ ಅಂತಾನೆ ಈ ತೊಂದರೆ ಕೊಡ್ತಾ ಇದ್ದಾರೆ. ಈಗಾಗಲೇ 69 ವರ್ಷ ವಯಸ್ಸಾಗಿದೆ. ಜನರ ಕೆಲಸ ಮಾಡಲು ಕಷ್ಟವಾಗಬಹುದು. ಅಲ್ಲದೇ ನಾನು ಕೆಟ್ಟ ಜಾತಿಯಲ್ಲಿ ಹುಟ್ಟಿದ್ದೀನಿ. ಹಾಗಾಗಿ ನನ್ನನ್ನು ತುಳಿಯಲಾಗುತ್ತಿದೆ. ನಾನು ಹುಟ್ಟಿದ ಜಾತಿ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನನ್ನ ಸಮರ್ಥಿಸಿಕೊಳ್ಳಲು ಬೇರೆ ಜಾತಿಯಲ್ಲೂ ಸ್ನೇಹಿತರಿದ್ದಾರೆ. ಆದರೂ ನನ್ನ ವಿರುದ್ಧ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Comments are closed.