ಕರ್ನಾಟಕ

ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್!

Pinterest LinkedIn Tumblr

ಬೆಂಗಳೂರು: ರಾಜ್ಯಪಾಲರು ಎರಡನೇ ಬಾರಿಗೆ ಡೆಡ್ ಲೈನ್ ನೀಡಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಶ್ವಾಸ ಮತಯಾಚನೆ ಮಾಡಲಿಲ್ಲ. ಇನ್ನು ರಾತ್ರಿಯಾಗಿದ್ದರಿಂದ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ರಾಜ್ಯಪಾಲರ ನಿರ್ದೇಶನ ಹಿನ್ನೆಲೆಯಲ್ಲಿ ಇಂದು ತಡರಾತ್ರಿಯಾದರು ಪರವಾಗಿಲ್ಲ ಎಂದು ಬಿಜೆಪಿ ಮೌನವಾಗಿ ಕಳುತಿತ್ತು. ಆದರೆ ತಡವಾಗಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಮಾಜಿ ಮುಖ್ಯಮಂತ್ರಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಇನ್ನು ಮಾತನಾಡುವ ಶಾಸಕರು ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಇಂದು ವಿಶ್ವಾಸಯಾಚನೆಗೆ ಹಾಕುವುದು ಬೇಡ ಎಂದು ಸ್ಪೀಕರ್ ರಮೇಶ್ ಕುಮಾರ್ ಬಳಿ ಮನವಿ ಮಾಡಿದರು.

ಇದಕ್ಕೆ ರಮೇಶ್ ಕುಮಾರ್ ಅವರು ಸೋಮವಾರ ಶತಾಯಗತಾಯ ವಿಶ್ವಾಸ ಮತಯಾಚನೆ ಪ್ರಸವ ಮುಗಿಸಲೇಬೇಕು ಎಂದು ಹೇಳಿ ವಿಧಾನಸಭೆಯಿಂದ ಹೊರನಡೆದರು.

Comments are closed.