ಕರ್ನಾಟಕ

ವಿಧಾನಸೌಧಕ್ಕೆ ಬರಿಗಾಲಲ್ಲೇ ಬಂದ ರೇವಣ್ಣ

Pinterest LinkedIn Tumblr


ಬೆಂಗಳೂರು: ನಿಂಬೆಹಣ್ಣ ಹಿಡಿದು ಸುದ್ದಿಯಾಗಿದ್ದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಈಗ ವಿಶ್ವಾಸಮತ ನಿರ್ಣಯ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲು ವಿಧಾಸೌಧಕ್ಕೆ ಬರಿಗಾಲಲ್ಲೇ ಬಂದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸಮತದ ಮೇಲಿನ ಚರ್ಚೆ ನಡೆಯುತ್ತಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಈ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎಚ್ ಡಿ ರೇವಣ್ಣ ಬರಿಗಾಲಲ್ಲೇ ವಿಧಾನಸೌಧಕ್ಕೆ ಬಂದಿರುವ ವಿಡಿಯೋ ವೈರಲ್ ಆಗಿದೆ. ಹಲವು ಬಾರಿ ಬರಿಗಾಲಲ್ಲಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದ ರೇವಣ್ಣ, ಸದನಕ್ಕೂ ಬರಿಗಾಲಲ್ಲಿ ಆಗಮಿಸುವ ಮೂಲಕ ಗಮನ ಸೆಳೆದಿದ್ದಾರೆ.
ದೇವರ ಮೇಲಿನ ಅಪಾರ ನಂಬಿಕೆ ಹೊಂದಿರುವ ಎಚ್ ಡಿ ರೇವಣ್ಣ, ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹರಕೆಯ ಮೊರೆ ಹೋಗಿದ್ದಾರೆಯೇ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

Comments are closed.