ಕರ್ನಾಟಕ

ಸತ್ರು… ಜೆಡಿಎಸ್ ಜೊತೆ ಹೋಗಲ್ಲ, ಅಪ್ಪ ಮಕ್ಕಳ ಆಟ ನೋಡಿದ್ದೇವೆ: ರೇಣುಕಾಚಾರ್ಯ

Pinterest LinkedIn Tumblr


ಬೆಂಗಳೂರು: ಸತ್ರು… ಜೆಡಿಎಸ್ ಜೊತೆ ಹೋಗಲ್ಲ, ಅಪ್ಪ ಮಕ್ಕಳ ಆಟ 20-20 ಸರ್ಕಾರ ಇದ್ದಾಗಲೇ ನೋಡಿದ್ದೇವೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸೋದ್ರಲ್ಲಿ ಕುಮಾರಸ್ವಾಮಿ ನಿಸ್ಸಿಮರು

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈಶ್ವರಪ್ಪ ಮುರಳಿಧರ್ ರಾವ್ ಭೇಟಿ ಆಕಸ್ಮಿಕ, ಸುಳ್ಳು ಸುದ್ದಿ ಹಬ್ಬಿಸೋದ್ರಲ್ಲಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ನಿಸ್ಸಿಮರು. ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಹೆದರಿಸಿಲು, ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಎಂದು ಬಿಂಬಿಸುತ್ತಿದ್ದಾರೆ. ಅವರ ಜೊತೆ ನಾವು ಹೋಗ್ತಿವಾ..? ಕಾರ್ಯಕರ್ತರಿಗೆ ಎಲ್ಲರಿಗೂ ಬೇಸರ ಆಗಿದೆ.

ಸಾ .ರಾ ಮಹೇಶ್ ಭೇಟಿ ಬಗ್ಗೆ ಕಾರ್ಯಕರ್ತರು ಕರೆ ಮಾಡಿ ಕೇಳ್ತಾ ಇದ್ದಾರೆ. ಜೆಡಿಎಸ್ ಜೊತೆ ಸರ್ಕಾರ ಮಾಡ್ತಿರಾ ಎಂದು ಇದು ಆಕಸ್ಮಿಕ ಭೇಟಿ ಅಷ್ಟೇ ಎಂದು ಅವರಿಗೆ ತಿಳಿಸಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದರು.

ಜೆಡಿಎಸ್ ಜೊತೆ ಸರ್ಕಾರ ಮಾಡಿ ಸೋತು ಹೋಗಿದ್ದೇವೆ. ಇನ್ನು ಸಾಧ್ಯವಿಲ್ಲ

ನಂತರ ಇದೇ ವಿಚಾರವಾಗಿ ಯಡಿಯೂರಪ್ಪ ಮಾತನಾಡಿದ್ದು, ಸಾ.ರಾ ಮಹೇಶ್ ಬಿಜೆಪಿ ಮುಖಂಡ ಭೇಟಿಗೆ ಹೊಸ ಅರ್ಥ ಬೇಡ, ಅವರ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ, ಮೊದಲೇ ನಾವು ಜೆಡಿಎಸ್ ಜೊತೆ ಸರ್ಕಾರ ಮಾಡಿ ಸೋತು ಹೋಗಿದ್ದೇವೆ. ಇನ್ನು ಸಾಧ್ಯವಿಲ್ಲ ಅವರ ಭೇಟಿ ಕೋ ಇನ್ಸಿಡೆಂಟ್ ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು

ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಮ್ಮ ಗಮನ ಇದೆ. ಸೋಮವಾರದಿಂದ ಸದನದಲ್ಲಿ ಏನು ಮಾಡಬೇಕು ಅನ್ನೋದನ್ನು ತೀರ್ಮಾನಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

Comments are closed.