ಕರ್ನಾಟಕ

ಕುಮಾರಸ್ವಾಮಿ ಯಾಕೆ ರಾಜೀನಾಮೆ ನೀಡಬೇಕು: ಡಿಕೆಶಿ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಯಾಕೆ ರಾಜೀನಾಮೆ ಕೊಡಬೇಕು ಎಂದು ಜಲಸಂಪನ್ಮೂಲ ಸಚಿವ ಡಿ .ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಯಾಕೆ ರಿಸೈನ್ ಮಾಡ್ಬೇಕು, 2008, 2009 ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೊಟ್ರಿದ್ರಾ ರಾಜಿನಾಮೆ? ಎಂದು ಡಿ. ಕೆ ಶಿವಕುಮಾರ್ ಹೇಳಿದ್ದಾರೆ.

ನನಗೆ ಸ್ನಾನ ಮಾಡಲೂ ಅವಕಾಶ ಕೊಡಲಿಲ್ಲಾ

ಮುಂಬೈಯಿಂದ ಮಧ್ಯರಾತ್ರಿ ಬಂದೆ. ನನ್ನನ್ನು ಡಿಪಾರ್ಟ್ ಮಾಡಿದ್ದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆದುಕೊಳ್ಳೋ ರೀತಿಯಲ್ಲ, ನಾನು ಟೂರ್ ಹಾಕ್ಕೊಂಡು ಹೋಗಿದ್ದೆ, ಅತೃಪ್ತರು ಭೇಟಿ ಮಾಡದಿರಲಿಲು ಮನವಿ ಮಾಡಿದ್ದಾರೆ ಅಂದರು, ಹೋಟೆಲ್ ರಿಸರ್ವೇಶನ್ ಬುಕ್ ಮಾಡಿ ನಂತರ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾನೂನು ತಜ್ಙರ ಸಲಹೆ ಪಡೆದು ಕಾನೂನು ಹೋರಾಟ ಮಾಡ್ತೇನೆ

ನನಗೆ ಸ್ನಾನ ಮಾಡಲೂ ಅವಕಾಶ ಕೊಡಲಿಲ್ಲಾ, ಪೊಲೀಸರು ಹೋಟೆಲ್ ಹೋಗದಂತೆ ತಡೆದಿದ್ದಾರೆ. ಹೋಟೆಲ್ ಮೇಲೆ ಹಾಗೂ ತಡೆದಿದ್ದವರ ಮೇಲೆ ಮುಂದಿನ ಕ್ರಮ ಕೈಗೊಳ್ತೀನಿ, ಕಾನೂನು ತಜ್ಙರ ಸಲಹೆ ಪಡೆದು ಕಾನೂನು ಹೋರಾಟ ಮಾಡ್ತೇನೆ ಎಂದು ತಿಳಿಸಿದರು. ಸಭೆಯ ಬಗ್ಗೆ ತಿಳಿಸಲು ಸಾಧ್ಯ ವಿಲ್ಲ, ಬಿಜೆಪಿ ಯಾಕೆ ಡ್ರಾಮ ಮಾಡ್ತಿದೆ ಅಂತ ಗೊತ್ತಿಲ್ಲ ಎಂದು ಶಿವಕುಮಾರ್ ತಿಳಿಸಿದರು.

Comments are closed.