
ರಾಜ್ಯದಲ್ಲಿ ಮತ್ತೆ ಕಮಲ ಅರಳಿಸ್ಬೇಕು. ಇದು ಬಿಜೆಪಿ ನಾಯಕರನ್ನು ಒಂದು ವರ್ಷದಿಂದ ಬಿಟ್ಟು ಬಿಡದೆ ಕಾಡ್ತಿರೋ ಕನಸು. ಕುಂತ್ರೂ ನಿಂತ್ರೂ ದೋಸ್ತಿ ಸರ್ಕಾರದ ವಿರುದ್ಧ ಹರಿಹಾಯ್ತಿದರು. ಸದ್ಯದಲ್ಲೇ ಸರ್ಕಾರ ಉರುಳುತ್ತೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅನ್ನೋ ಮಂತ್ರ ಜಪಿಸ್ತಿದರು. ಆ ಟೈಮ್ ಈಗ ಬಂದಂತೆ ಕಾಣ್ತಿದೆ. ದೋಸ್ತಿ ಶಾಸಕರೇ ಕೈಕೊಟ್ಟು ಕಮಲ ಪಾಳಯ ಸೇರ್ತಿದ್ದಂತೆ ಬಿಎಸ್ವೈ ಆ್ಯಂಡ್ ಟೀಂ ಫುಲ್ ಆ್ಯಕ್ಟಿವ್ ಆಗಿದೆ.
ಯಾವಾಗ 8 ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗ್ಲಿಲ್ವೋ ಕಮಲಾಧಿಪತಿಗಳು ಫುಲ್ ಟೆನ್ಶನ್ ಆಗಿದ್ದಾರೆ. ಹೇಗಾದರು ಮಾಡಿ ರೆಬೆಲ್ಸ್ ನಾಯಕರ ರಾಜೀನಾಮೆ ಅಂಗೀಕಾರ ಮಾಡ್ಲೇ ಬೇಕು ಅಂತಾ ಪರೇಡ್ ಮಾಡ್ತಿದ್ದಾರೆ. ಬಿಎಸ್ವೈ ನೇತೃತ್ವದಲ್ಲಿ ಒಗ್ಗೂಡಿದ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಬಹುಮತ ಇಲ್ಲದ ಸರ್ಕಾರ ತೊಲಗಲಿ. ಬಿಜೆಪಿಗೆ ಅಧಿಕಾರ ನೀಡಲಿ ಅಂತಾ ಆಕ್ರೋಶದ ಸುರಿಮಳೆಗೈದರು.
ಇಷ್ಟಕ್ಕೆ ಸುಮ್ಮನಾಗದ ಕೇಸರಿ ಬ್ರಿಗೇಡ್, ರಾಜ್ಯಪಾಲರನ್ನು ಭೇಟಿ ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಬಹುಮತವಿಲ್ಲ. ಆದಷ್ಟು ಬೇಗ ಅತೃಪ್ತ ರಿಸೈನ್ ಅಕ್ಸೆಪ್ಟ್ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ರಾಜ್ಯಸರ್ಕಾರ ಬುಡಮೇಲಾಗೋ ಹಂತಕ್ಕೆ ಹೋದರು, ಮೈತ್ರಿ ನಾಯಕರು ಮಾತ್ರ ಹೋರಾಟ ಬಿಡ್ತಿಲ್ಲ. ಸರ್ಕಾರ ಉಳಿಸಿಕೊಳ್ಳಲೇ ಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇ ಬೇಕು ಅಂತ ಪಣತೊಟ್ಟು ನಿಂತಿದ್ದಾರೆ. ಇದು ಎಲ್ಲೋ ಬಿಜೆಪಿಗೆ ಸಣ್ಣದೊಂದು ನಡುಕ ಹುಟ್ಟಿಸ್ತಿದೆ. ಹೀಗಾಗಿ ಹೋದಲ್ಲಿ ಬಂದಲ್ಲಿ ದೋಸ್ತಿ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸ್ತಿದ್ದಾರೆ.
ನಂತರ ಸ್ಪೀಕರ್ ಕಚೇರಿಯತ್ತ ಮುಖ ಮಾಡಿದ ಯಡಿಯೂರಪ್ಪ ಆ್ಯಂಡ್ ಟೀಂ ಅಲ್ಲೂ ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದರು. ರೆಬೆಲ್ಸ್ ಶಾಸಕರೆಲ್ಲಾ ಸ್ವ ಇಚ್ಚೆಯಿಂದ್ಲೇ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರಿಸೈನ್ ಪುರಸ್ಕರಿಸುವಂತೆ ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ನಾಯಕರು ಸರ್ಕಾರ ರಚನೆ ಕನಸು ಕಾಣ್ತಿದ್ದು, ಮೈತ್ರಿ ನಾಯಕರು ಇದಕ್ಕೆ ಚಾನ್ಸ್ ಮಾಡ್ಕೊಳ್ತಾರಾ ಕಾದು ನೋಡ್ಬೇಕು.
Comments are closed.