ಕರ್ನಾಟಕ

ರಾಜೀನಾಮೆ ನೀಡಿದ ಕಾಂಗ್ರೆಸ್ ಅತೃಪ್ತರೆಲ್ಲ ನನ್ನ ಆಪ್ತರೇ

Pinterest LinkedIn Tumblr


ಬೆಂಗಳೂರು: ಪಕ್ಷ ಬಿಟ್ಟುಹೋಗದಂತೆ ಡಾ. ಸುಧಾಕರ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನವೊಲಿಸಲು ಪ್ರಯತ್ನ ಪಟ್ಟಿದ್ದು, ಸಂಧಾನ ವಿಫಲವಾಗಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಬಿ ಫಾರಂ ಕೊಟ್ಟು ಗೆಲ್ಲಿಸಿಕೊಂಡಿದ್ದೇವೆ. ನಾವು ಮನವೊಲಿಕೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಇನ್ನು ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಸುಧಾಕರ್‌ಗೂ ಬಿಜೆಪಿಗೂ ಏನು ಸಂಬಂಧ..? ಬಿಜೆಪಿ ಶಾಸಕರು ಗೂಂಡಾಗಳು, ರೌಡಿಗಳು. ಅವರ ವರ್ತನೆಯನ್ನ ನಾನು ಖಂಡಿಸುತ್ತೇನೆ. ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ನಮ್ಮ ಶಾಸಕರ ಜೊತೆ ನಾವು ಮಾತನಾಡುತ್ತೇವೆ . ಬಿಜೆಪಿ ನಾಯಕರು ಆಪರೇಷನ್‌ಗೆ ಇಳಿದಿದ್ದಾರೆ. ಅಮಿತ್ ಷಾ ಮತ್ತು ಮೋದಿ ಇದಕ್ಕೆ ಇಳಿದಿದ್ದಾರೆ. ಸಿಬಿಐ, ಇಡಿ, ಐಟಿಯನ್ನ ದುರ್ಬಳಕೆ ಮಾಡಿಕೊಳ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಸುಧಾಕರ್‌ ಅವರನ್ನ ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ಅವರು ನನ್ನ ವೆಲ್ ವಿಶರ್, ನಮ್ಮ ಶಾಸಕರು. ಹಾಗಾಗಿ ಕರೆದುಕೊಂಡು ಹೋಗಿ ಮಾತನಾಡಿದ್ದೇವೆ ಎಂದಿದ್ದಾರೆ.

ಇನ್ನು ಸುಧಾಕರ್ ಪತ್ನಿ ನನಗೆ ಕಾಲ್ ಮಾಡಿ, ನನ್ನ ಪತಿಯನ್ನು ಕಾಪಾಡಿ ಎಂದು ಹೇಳಿದರು ಎಂದು ಯಡಿಯೂರಪ್ಪ ಹೇಳಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸುಧಾಕರ್ ಪತ್ನಿ ಜತೆ ನಾನು ಮಾತನಾಡಿದ್ದೇನೆ. ಅಂತಹದ್ದೇನು ನಡೆದಿಲ್ಲ ಅಂತ ತಿಳಿಸಿದ್ದೇನೆ. ಸುಧಾಕರ್ ಅವರನ್ನ ರಕ್ಷಣೆ ಮಾಡಲು ಬಿಜೆಪಿ ಯಾರು? ರಕ್ಷಣೆ ಮಾಡಲು ಯಡಿಯೂರಪ್ಪ ಯಾರು? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಲಜ್ಜೆಗೆಟ್ಟವರು, ನಾಚಿಕೆ ಬಿಟ್ಟವರು. ಹಿಂದೆ ಐದು ಬಾರಿ ಆಪರೇಷನ್ ಮಾಡಲು ಯತ್ನಿಸಿತ್ತು. ಆದರೆ ಅವರು ಎಲ್ಲದರಲ್ಲೂ ಫೇಲ್ ಆಗಿದ್ರು. ಈಗ ಮತ್ತೆ ಇಂತಹ ಲಜ್ಜೆಗೆಟ್ಟ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಶಾಸಕರು ಆಮಿಷಕ್ಕೆ ಒಳಗಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

Comments are closed.