ಮನವೊಲಿಕೆ ಕಸರತ್ತು ಕೈಗೂಡದಿದ್ದಾಗ ಕಾಂಗ್ರೆಸ್ ಕೊನೆಗೆ ಅನರ್ಹತೆ ಅಸ್ತ್ರ ಬಿಟ್ಟಿದೆ. ಶಾಸಕಾಂಗ ಸಭೆಯ ನಿರ್ಣಯದಂತೆ ರಾಮಲಿಂಗಾ ರೆಡ್ಡಿ ಮತ್ತು ಆನಂದ್ ಸಿಂಗ್ ಹೊರತುಪಡಿಸಿ ಉಳಿದ ಅತೃಪ್ತರ ವಿರುದ್ಧ ಸ್ಪೀಕರ್‌ಗೆ ದೂರು ನೀಡಿದ್ದು, ಶಾಸಕತ್ವ ಅನರ್ಹಗೊಳಿಸುವಂತೆ ಮನವಿ ಮಾಡಿದೆ. ಸ್ಪೀಕರ್ ಕಾಂಗ್ರೆಸ್ ದೂರು ಪರಿಗಣಿಸಿದರೆ, ಅತೃಪ್ತರ ಶಾಸಕರ ಭವಿಷ್ಯ ಡೋಲಾಯಮಾನ ಆಗಲಿದೆ.
ಕಳೆದ 4 ದಿನಗಳಲ್ಲಿ ರಾಜೀನಾಮೆ ಹೈಡ್ರಾಮಾ ಕುತೂಹಲ ಕೆರಳಿದೆ. ಕಳೆದ ಶನಿವಾರ 13 ಮಂದಿ ಶಾಸಕರು ರಾಜೀನಾಮೆ ನೀಡಿ, ಮುಂಬೈನಲ್ಲಿ ತಂಗಿದ್ದಾರೆ. ಇವರ ಮನವೊಲಿಕೆಗೆ ದೋಸ್ತಿಗಳು ಕಸರತ್ತು ನಡೆಸಿ ಸುಸ್ತಾಗಿದ್ದಾರೆ. ಕೊನೆಗೆ ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ಶಿಸ್ತು ಕ್ರಮದ ಎಚ್ಚರಿಕೆ ರವಾನಿಸಿದ್ದಾರೆ.
ವಿಧಾನಸೌಧದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ 10 ಮಂದಿ ಗೈರಾಗಿದ್ದರು. ಆದರೆ, ಸಭೆಗೆ ಗೈರು ಹಾಜರಾಗ್ತಾರೆ ಅಂತ ಹೇಳಲಾಗ್ತಿದ್ದ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಹಾಜರಾಗಿ ಅಚ್ಚರಿ ಮೂಡಿಸಿದರು. ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಆನೇಕಲ್ ಶಾಸಕ ಶಿವಣ್ಣ, ಖಾನಾಪುರದ ಅಂಜಲಿ ನಿಂಬಾಳ್ಕರ್ ಸೇರಿದಂತೆ 10 ಶಾಸಕರು ಗೈರಾಗಿದ್ದರು. ಆದರೆ, ಎಂಟಿಬಿ, ಖನೀಜಾ ಫಾತಿಮಾ, ಭದ್ರಾವತಿ ಶಾಸಕ ಸಂಗಮೇಶ್ ಅವರು ಗೈರಿಗೆ ಕಾರಣ ಸಕಾರಣ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ಜೊತೆಗಿನ ಮೈತ್ರಿ ಮುರಿದುಕೊಂಡು ವಿರೋಧ ಪಕ್ಷದಲ್ಲಿ ಕೂರಲು ಕೆಲ ಕಾಂಗ್ರೆಸ್ ಶಾಸಕರು ಸಲಹೆ ನೀಡಿದರು. ವಿರೋಧ ಪಕ್ಷದಲ್ಲಿದ್ದುಕೊಂಡು ರಾಜ್ಯದಾದ್ಯಂತ ಪಕ್ಷ ಸಂಘಟಿಸಿ, ಮುಂದಿನ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸಿ, ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಅಭಿಪ್ರಾಯ ಮಂಡಿಸಿದರು. ಮತ್ತೆ ಕೆಲವರು ಸಚಿವರ ವಿರುದ್ಧ ಅಸಮಾಧಾನವನ್ನೂ ವ್ಯಕ್ತಪಡಿಸಿದರು. ನೀವು ಮಾತ್ರ ಸಚಿವ ಸ್ಥಾನದ ಅಧಿಕಾರ ಅನುಭವಿಸಿದ್ರೆ ಸಾಕಾ..? ನಮಗೂ ಬೇಕು ಎಂದು ಬೇಡಿಕೆ ಮಂಡಿಸಿದರು. ಮತ್ತೆ ಕೆಲವರು ಎಲ್ಲಾ ಇಲಾಖೆಗಳಲ್ಲೂ ರೇವಣ್ಣ ಹಸ್ತಕ್ಷೇಪಕ್ಕೆ ಬೇಸರ ವ್ಯಕ್ತಪಡಿಸಿದರು. ಅಧಿಕಾರ ಉಳಿಸಿಕೊಳ್ಳೋದು ಮುಖ್ಯವಲ್ಲ, ಪಕ್ಷ ಉಳಿಯಲು ಬಿಡಿ ಎಂದು ಶಾಸಕರು ಸಲಹೆ ನೀಡಿದರು ಎಂದು ತಿಳಿದುಬಂದಿದೆ
ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗವು ಸ್ಪೀಕರ್ ಭೇಟಿ ಮಾಡಿ ಅತೃಪ್ತರ ವಿರುದ್ಧ ದೂರು ನೀಡಿತು. ರಾಮಲಿಂಗಾ ರೆಡ್ಡಿ ಮತ್ತು ಆನಂದ್ ಸಿಂಗ್ ಹೊರತುಪಡಿಸಿ ರಾಜೀನಾಮೆ ನೀಡಿರುವ ಉಳಿದ ಕಾಂಗ್ರೆಸ್ ಶಾಸಕರ ಶಾಸಕತ್ವ ಅನರ್ಹ ಗೊಳಿಸುವಂತೆ ಮನವಿ ಮಾಡಿತು.
ಬಿಜೆಪಿ ವಿರುದ್ಧ ಆರೋಪ ಮಾಡಿದ ಡಿ. ಕೆ. ಶಿವಕುಮಾರ್, ರಾಜೀನಾಮೆಗೂ ನಮಗೂ ಸಂಬಂಧವಿಲ್ಲ ಅಂತಿದೆ. ಆದರೆ, ಅತೃಪ್ತ ಶಾಸಕರ ಪಿಕಪ್, ಡ್ರಾಪ್ ಮಾಡ್ತಿದೆ. ಇದಕ್ಕೆ ಏನು ಹೇಳೋದು ಅಂತ ಕಿಡಿಕಾರಿದರು.
ಸಿಎಲ್‌ಪಿ ಸಭೆಯ ಮತ್ತೊಂದು ನಿರ್ಣಯದಂತೆ ಸ್ಪೀಕರ್‌ಗೆ ದೂರು ಕೊಟ್ಟ ಬಳಿಕ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್‌ನ ಎಲ್ಲ ನಾಯಕರು ಪ್ರತಿಭಟನೆ ನಡೆಸಿದರು. ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
Comments are closed.