ಕರ್ನಾಟಕದ ಟ್ರಬಲ್ ಶೂಟರ್ ಖ್ಯಾತಿ ಕನಕಪುರದ ಬಂಡೆ, ಡಿಕೆಶಿ ಅಲಿಯಾಸ್ ಡಿ.ಕೆ.ಶಿವಕುಮಾರ್ ಬುಧವಾರ ಅಕ್ಷರಷಃ ರಾಷ್ಟ್ರ ರಾಜಕಾರಣ ಹಾಗೂ ರಾಷ್ಟ್ರೀಯ ಮಾಧ್ಯಮವನ್ನು ಆವರಿಸಿಕೊಂಡು ಬಿಟ್ಟಿದ್ದರು. ಇದಕ್ಕೆ ಕಾರಣವಾಗಿದ್ದು, ಅವರ ದಿಟ್ಟ ನಡೆ ಹಾಗೂ ಡೋಂಟ್ ಕೇರ್ ಪ್ರವೃತ್ತಿ.
ಹೌದು ಒಕ್ಕಲಿಗ ಸಮಾಜದಲ್ಲಿ ಹುಟ್ಟಿ ಅತ್ಯಂತ ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸುತ್ತ ಬಂದಿರುವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿಗೆ ಎಂದಿಗೂ ಆಪತ್ ಬಾಂಧವರಂತೆ ನಿಂತವರು. ಅದು ರಾಜ್ಯ ಕಾಂಗ್ರೆಸ್ ಸಂಕಷ್ಟವಿರಲಿ, ರಾಷ್ಟ್ರೀಯ ಕಾಂಗ್ರೆಸ್ನ ಸಂಕಷ್ಟವಿರಲಿ. ಅಲ್ಲಿ ಸಹಾಯ ಹಸ್ತದೊಂದಿಗೆ ನಿಲ್ಲುವ ಸಹೃದಯಿ ರಾಜಕಾರಣಿ ಡಿ.ಕೆ.ಶಿವಕುಮಾರ್.
ಬಹುಷಃ ಪಕ್ಷಕ್ಕಾಗಿ ಟೊಂಕ ಕಟ್ಟಿ ನಿಲ್ಲುವುದು ಎಂಬುದಕ್ಕೆ ಡಿಕೆಶಿ ಅಕ್ಷರಷಃ ಅರ್ಥದಂತೆ ದುಡಿದಿದ್ದಾರೆ. ಇಂದೂ ಕೂಡ ಪಕ್ಷವನ್ನು ಹಾಗೂ ಪಕ್ಷದೊಂದಿಗೆ ಬೆಸೆದುಕೊಂಡ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಡಿ.ಕೆ.ಶಿವಕುಮಾರ್ ಮಾಯಾನಗರಿ ಮುಂಬೈಯಲ್ಲಿ ಪೊಲೀಸರ ವಶವಾಗುವರೆಗೂ ಹೋರಾಟ ನಡೆಸುವ ಮೂಲಕ ಮತ್ತೊಮ್ಮೆ ರಾಷ್ಟ್ರದ ಗಮನ ಸೆಳೆದರಲ್ಲದೇ ಅಕ್ಷರಷಃ ಮಾಧ್ಯಮಗಳಲ್ಲಿ ಹೈಲೈಟ್ ಆಗಿ ಗಮನ ಸೆಳೆದರು.
ರಾಜ್ಯದಿಂದ ಅತೃಪ್ತಿ ಹೊತ್ತು ಮುಂಬೈಗೆ ತೆರಳಿರುವ ಶಾಸಕರನ್ನು ಮನವೊಲಿಸುವ ಸಲುವಾಗಿ ಡಿಕೆಶಿ ಮುಂಜಾನೆಯೇ ಮುಂಬೈಗೆ ತೆರಳಿದ್ದರು. ಆದರೆ ರಿನೈಸೆನ್ ಹೊಟೇಲ್ ಬಳಿಕ ಕನಕಪುರ ಬಂಡೆಗೆ ಎದುರಾದ ಮುಂಬೈ ಪೊಲೀಸರು ಹೊಟೇಲ್ ಒಳಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಅಷ್ಟೇ ಅಲ್ಲ ಅತೃಪ್ತರ ಭೇಟಿಗೂ ಅವಕಾಶ ನೀಡದೇ ಗೇಟ್ನಲ್ಲೇ ನಿಲ್ಲಿಸಿದರು.
ಇದಕ್ಕೆ ಅಕ್ಷರಷಃ ಕೆರಳಿದ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಶಾಸಕರನ್ನು ಭೇಟಿ ಮಾಡದೇ ಸ್ಥಳದಿಂದ ತೆರಳೋದಿಲ್ಲ ಎನ್ನುವ ಮೂಲಕ ತಮ್ಮ ದಿಟ್ಟ ನಡೆ ಪ್ರದರ್ಶಿಸಿದರು. ಸುರಿಯುವ ಮಳೆಯಲ್ಲೂ ಕದಲದೇ ಅಲ್ಲಿಯೇ ಕುಳಿತಿದ್ದರು. ಕೊನೆಗೂ ಡಿಕೆಶಿಯನ್ನು ಸ್ಥಳದಿಂದ ಕದಲಿಸಲಾಗದೇ ಸೋತ ಮುಂಬೈ ಪೊಲೀಸರು ಕಮೀಷನರ್ ಆದೇಶದ ಮೇರೆಗೆ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಮೂಲಕ ಡಿಕೆಶಿಯ ಹೋರಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.
ಇನ್ನು ಡಿಕೆಶಿಯವರ ದಿಟ್ಟ ನಡೆ ಹಾಗೂ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಡೋಂಟ್ ಕೇರ್ ಎನ್ನುವಂತೆ ಹೊಟೇಲ್ ಮುಂದೆಯೇ ನಿಂತ ನಡೆ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು,ಮೋದಿ ಬಳಿಕ ಅಕ್ಷರಷಃ ರಾಷ್ಟ್ರ ರಾಜಕಾರಣವನ್ನು ಡಿಕೆಶಿ ಆವರಿಸಿಕೊಂಡಿದ್ದಾರೆ ಎಂದರೇ ತಪ್ಪಾಗಲಿಕ್ಕಿಲ್ಲ.
ಒಂದರ್ಥದಲ್ಲಿ ಇಂದು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ನ ಎಲ್ಲ ಸ್ಟಾರ್ ನಾಯಕರ ಜನಪ್ರಿಯತೆಯನ್ನು, ಸಾಧನೆಯನ್ನು ಮೀರಿಸಿದ್ದು, ರಾಹುಲ್ ಗಾಂಧಿಗಿಂತಲೂ ಪ್ರಭಾವಶಾಲಿಯಾಗಿ ದೇಶದ ಉದ್ಧಗಲವನ್ನು ವ್ಯಾಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರ ಉಳಿಯುತ್ತೋ ಉರುಳುತ್ತೋ ಆದರೆ ಡಿ.ಕೆ.ಶಿವಕುಮಾರ್ ಏಕಾಂಗಿಯಾಗಿ ಪಕ್ಷದ ಉಳಿವಿಗಾಗಿ, ಸರ್ಕಾರದ ರಕ್ಷಣೆಗಾಗಿ ತೆಗೆದುಕೊಂಡ ನಿರ್ಧಾರ ಹಾಗೂ ಅವರ ನಡೆ ನಿಜಕ್ಕೂ ಅವರು ಪಕ್ಷಕ್ಕೆ ಎಷ್ಟು ನಿಷ್ಠರು, ಎಂತಹ ಪ್ರಾಮಾಣಿಕ ರಾಜಕಾರಣಿ ಹಾಗೂ ದಿಟ್ಟ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.
ದೇಶದಾದ್ಯಂತ ಡಿಕೆಶಿಯವರ ಇಂದಿನ ನಡೆ ಚರ್ಚೆಗೆ ಗ್ರಾಸವಾಗಿದ್ದು,ಡಿಕೆಶಿ ನಡೆ ಮಾಧ್ಯಮ ಕೇಂದ್ರಗಳ ಆಕರ್ಷಣೆಯ ಸಂಗತಿಯಾಗಿದೆ. 21 ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಡಿ. ಕೆ. ಶಿವಕುಮಾರ್ ಇಂದು ಕರ್ನಾಟಕದ ಗಡಿ ದಾಟಿ ದೇಶ ಮಟ್ಟದಲ್ಲಿ ಗುಣಾತ್ಮಕ ರಾಜಕಾರಣಕ್ಕಾಗಿ ಗುರುತಿಸಿಕೊಂಡಿದ್ದು, ದೇಶದ ಗಮನ ಸೆಳೆದಿದ್ದಾರೆ.
Comments are closed.