ಕರ್ನಾಟಕ

ತನ್ನ ಭಾಷೆಯಲ್ಲಿ ಡಿಕೆಶಿಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Pinterest LinkedIn Tumblr


ಬೆಂಗಳೂರು: ಶಾಸಕರಿಗೆ ನಿಮ್ಮ ಭೇಟಿ ಮಾಡಲು ಇಷ್ಟ ಇಲ್ಲ ಅಂದ ಮೇಲೆ ನಿಮಗೇನು ಕೆಲಸ, ಇದೇನೂ ಗೂಂಡಾ ರಾಜ್ಯ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್​ಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಶಿವಕುಮಾರ್ ಗೆ ನನ್ನ ಭಾಷೆಯಲ್ಲಿ ಎಚ್ಚರಿಕೆ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ. ಕೆ ಶಿವಕುಮಾರ್ ವಿರುದ್ಧ ಕೂಡಲೇ ಸ್ಪೀಕರ್ ಪೊಲೀಸ್ ಗೆ ದೂರು ನೀಡಬೇಕಾಗಿತ್ತು, ಆದರೆ ಕೊಟ್ಟಿಲ್ಲ ಎಂದರು. ಮುಂಬೈಗೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಶಾಸಕರಿಗೆ ನಿಮ್ಮ ಭೇಟಿ ಮಾಡಲು ಇಷ್ಟ ಇಲ್ಲ ಅಂದ ಮೇಲೆ ಅಲ್ಲಿ ನಿಮಗೇನು ಕೆಲಸ ಹೇಳಿ ಎಂದು ಡಿ. ಕೆ ಶಿವಕುಮಾರ್​ಗೆ ಪ್ರಶ್ನೆ ಮಾಡಿದರು. ನೀವು ಅಂಗಡಿ ಬಂದ್ ಮಾಡಬೇಕು ಎಂದು ಶಿವಕುಮಾರ್ ಗೆ ನನ್ನ ಭಾಷೆಯಲ್ಲಿ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ತಿಳಿಸಿದರು.

ಸ್ಪೀಕರ್ ಅವರ ಸಂಬಂಧಿಕರ ಅರೋಗ್ಯದ ನೆಪದಲ್ಲಿ ಹೋದರು

ಸ್ಪೀಕರ್ ಬಗ್ಗೆ ನಮಗೆ ಗೌರವ ಇದೆ. ಆದರೆ ಸ್ಪೀಕರ್ ಬಗ್ಗೆ ರಾಜ್ಯದ ಜನ ಮಾತಾಡ್ತಿದ್ದಾರೆ. ಯಾಕೆ ರಾಜೀನಾಮೆ ಅಂಗೀಕಾರ ಮಾಡಿಲ್ಲ ಅಂತ ಜನ ಮಾತಾಡ್ತಿದ್ದಾರೆ. 11 ಶಾಸಕರು ರಾಜೀನಾಮೆಗೆ ಬಂದ ಸಂದರ್ಭದಲ್ಲಿ ಸ್ಪೀಕರ್ ಅವರ ಸಂಬಂಧಿಕರ ಅರೋಗ್ಯದ ನೆಪದಲ್ಲಿ ಹೋದರು ಎಂದರು.

ಸ್ಪೀಕರ್ ಕ್ರಮ ತೆಗೆದುಕೊಂಡಿಲ್ಲ?

ರಾಜೀನಾಮೆ ಪತ್ರ ಹರಿದ ಡಿ.ಕೆ. ಶಿವಕುಮಾರ್ ಮೇಲೆ ಯಾಕೆ ಸ್ಪೀಕರ್ ಕ್ರಮ ತೆಗೆದುಕೊಂಡಿಲ್ಲ? ಸಮ್ಮಿಶ್ರ ಸರ್ಕಾರ ಬಂದ ವೇಳೆ ಗೌರವಪೂರ್ವಕವಾಗಿ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಇಳಿಸಲಿಲ್ಲ, ನ್ಯಾಯ ದೇವತೆಯ ಸ್ಥಳದಲ್ಲಿ ತಾವು ಇದ್ದೀರಿ, ಪೀಠದ ಪಾವಿತ್ರ್ಯತೆಯನ್ನು ಕಾಪಾಡಿ ಎಂದು ಸ್ಪೀಕರ್ ರಮೇಶ್ ಕುಮಾರ್​ಗೆ ಮನವಿ ಮಾಡಿದರು.

Comments are closed.