
ಹಾಸನ: ಶವ ಸಂಸ್ಕಾರ, ತಿಥಿ ಮಾಡಿದ ಎರಡು ದಿನದ ಬಳಿಕ ಮನೆಗೆ ಆಶ್ಚರ್ಯಕರ ರೀತಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿ ಪ್ರತ್ಯಕ್ಷವಾದ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ಶಂಖ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜೂನ್ 18 ರಂದು ಸಿಕ್ಕ ಮೃತದೇಹವನ್ನು ಗ್ರಾಮದ ಶಿವಣ್ಣ ಎಂದು ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬದವರು.
ಶಿವಣ್ಣದೇ ಮೃತದೇಹ ಎಂದು ಭಾವಿಸಿ ಅಂತ್ಯಕ್ರಿಯೆ
ಕುಟುಂಬಸ್ಥರು ಶಿವಣ್ಣನ ಮಿಸ್ಸಿಂಗ್ ಕೇಸ್ ದಾಖಲಿಸಿದ 2 ದಿನಗಳ ಬಳಿಕ ಹಾಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿತ್ತು. ಈ ಮೃತದೇಹ ನೋಡಲು ಮೇಲ್ನೋಟಕ್ಕೆ ಶಿವಣ್ಣನ ರೀತಿ ಹೋಲುತ್ತಿತ್ತು. ಹಾಗಾಗಿ ಕುಟುಂಬಸ್ಥರು ಇದು ಶಿವಣ್ಣದೇ ಮೃತದೇಹ ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು.
15 ದಿನಗಳ ಹಿಂದೆ ನಾಪತ್ತೆ
ಹೆಂಡತಿ ಜೊತೆ ಜಗಳಮಾಡಿಕೊಂಡ 15 ದಿನಗಳ ಹಿಂದೆ ನಾಪತ್ತೆಯಾಗಿದ್ದರು. 15 ದಿನಗಳು ಕಳೆದರೂ ಶಿವಣ್ಣ ಮನೆಗೆ ಬರದೇ ಇರುವುದರಿಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು. ಈಗ ದಿಡೀರ್ ಪ್ರತ್ಯಕ್ಷವಾದ ಶಿವಣ್ಣನನ್ನು ಕಂಡು ಕುಟುಂಬದಲ್ಲಿ ಸಡಗರ ಮನೆಮಾಡಿದೆ.
Comments are closed.