
ಕೇಂದ್ರ ಸರ್ಕಾರದ ಮೇಲೆ ನೇರ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಯಡಿಯೂರಪ್ಪ ಅವರನ್ನು ಹೊರಗಿಟ್ಟು ಕೇಂದ್ರ ಸರ್ಕಾರದವರೇ ಸಮ್ಮಿಶ್ರ ಸರ್ಕಾರ ಬೀಳಿಸುವ ಕೆಲಸ ಮಾಡ್ತಿದ್ದಾರೆ ಎಂದು ದೂರಿದ್ದಾರೆ.
‘ಬಿಎಸ್ವೈ ಹೊರಗಿಟ್ಟು ಕೇಂದ್ರದವರಿಂದಲೇ ಪ್ರಯತ್ನ’
ಆಪರೇಷನ್ ಹಸ್ತದ ಸುಳಿವು ನೀಡಿದ ಅವರು, ನಮಗೂ ಶಕ್ತಿ ಇದೆ. ರಿವರ್ಸ್ ಆಪರೇಷನ್ ಮಾಡಲು ನಾವು ಸಿದ್ಧವಾಗಿದ್ದೇವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಮ್ಮಲ್ಲಿ ಯಾರೂ ಅತೃಪ್ತ ಶಾಸಕರಿಲ್ಲ, ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದು ಹೇಳಿದ್ದಾರೆ.
ಆನಂದ್ ಸಿಂಗ್ ರಾಜಿನಾಮೆಗೆ ಯಾವ ಕಾರಣ, ಏನು ಒತ್ತಡ ಅಂತ ಗೊತ್ತಿಲ್ಲ. ಬಿಜೆಪಿಯವರು ಸರಕಾರವನ್ನು ಅಲುಗಾಡಿಲು, ಗೊಂದಲ ಮೂಡಿಸಲು ಮುಂದಾಗಿದ್ದಾರೆ. ಸ್ಥಿರವಾಗಿರುವ ವಾತಾವರಣವನ್ನ ಅಸ್ಥಿರ ಮಾಡಲು ಬಿಜೆಪಿ ನಾಯಕರು ನಿರಂತರ ಪ್ರಯತ್ನ ಮಾಡ್ತಿದ್ದಾರೆ ಎಂದರು.
ಕೆಲವರನ್ನು ಬಿಜೆಪಿಯವರು ಹೆದರಿಸುವ ಪ್ರಯತ್ನ ಮಾಡ್ತಿದ್ದಾರೆ. ಬೇರೆ ಬೇರೆ ಸಂಸ್ಥೆಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್ ಮಾಡುವ ಕುತಂತ್ರವನ್ನು ಕೇಂದ್ರ ಬಿಜೆಪಿಯವರು ಮಾಡ್ತಿದ್ದಾರೆ. ನಮಗೆ ಬಹುಮತವಿದೆ. ಅಂತಹ ಸಂದರ್ಭ ಬಂದರೆ ನಮಗೂ ಶಕ್ತಿ, ಸಾಮರ್ಥ್ಯವಿದೆ ಆದರೆ ಅದಕ್ಕೆ ಕೈ ಹಾಕಿಲ್ಲ ಎಂದರು.
Comments are closed.