ಕ್ರೀಡೆ

ಧೋನಿ ನಿಧಾನಗತಿ ಬ್ಯಾಟಿಂಗ್​ ಕುರಿತು ಕೊಹ್ಲಿ ಬಿಚ್ಚಿಟ್ಟ ಸತ್ಯ..!

Pinterest LinkedIn Tumblr


ಬರ್ಮಿಂಗ್​ ಹ್ಯಾಮ್​: ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019. ಭಾನುವಾರ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಇಂಗ್ಲೆಂಡ್​ ಭಾರತ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ತಂಡ ಸೋತಿತು. ಆದರೆ ಗೆಲ್ಲುವ ಅವಕಾಶವಿದ್ದರು ಕೂಡ ಕೊನೆ ಓವರ್​ಗಳಲ್ಲಿ ಎಂಎಸ್​ ಧೋನಿ ಅವರ ನಿಧಾನಗತಿ ಆಟ ಸೋಲಿಗೆ ಕಾರಣವಾಯಿತ್ತೇ ಎಂಬ ಮಾಧ್ಯಮದವರ ಪ್ರಶ್ನೆಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾತನಾಡಿದ್ದಾರೆ.

ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಟದ ಮೈದಾನದವು ಬಿರುಸಿನ ಆಟಕ್ಕೆ ಸ್ಪಂದಿಸದೇ ಇರೋದು ಕೊನೆ ಓವರ್​ಗಳಲ್ಲಿ ರನ್​ ಬರದೆ ಇರೋದಕ್ಕೆ ಪ್ರಮುಖ ಕಾರಣವಾಗಿದೆ ಅಲ್ಲದೇ ಅವರು ಕೂಡ ಇಂಗ್ಲೆಂಡ್​ ತಂಡದ ಬೌಲಿಂಗ್​ಗೆ ಅನುಗುಣವಾಗಿ ಬ್ಯಾಟ್​​ ಬೀಸಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಆಲೋಚನೆ ಪ್ರಚಾರ ಎಂಎಸ್​ ಧೋನಿ ಅವರು ಬೌಂಡರಿಗಳ ಹೊಡೆಯಲು ಪ್ರಯತ್ನ ಮಾಡಿದ್ದರು ಆದರೆ ಅದು ಸಾಧ್ಯವಾಗಲಿಲ್ಲ ಎಂದ ಅವರು, ಆಂಗ್ಲರು ಕೂಡ ಬೌಲಿಂಗ್ಅನ್ನ ಸರಿಯಾದ ರೀತಿಯಲ್ಲಿ ಮಾಡಿದ್ದಾರೆ ಅಲ್ಲದೇ ಬಾಲ್​ ಕೂಡ ಮುಂದೆ ಸಾಗುತ್ತಿರಲಿಲ್ಲ. ಕೊನೆ ಕ್ಷಣದಲ್ಲಿ ಬ್ಯಾಟಿಂಗ್​ ಮಾಡೋದು ಬಹಳ ಕಷ್ಟ ಮುಂದಿನ ಪಂದ್ಯಗಳಲ್ಲಿ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ವಿರಾಟ್​ ಕೊಹ್ಲಿ ಅವರು ತಿಳಿಸಿದ್ದಾರೆ.

ಇಂಗ್ಲೆಂಡ್​ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡು 337ರನ್​ಗಳು ಸೇರಿಸಿತ್ತು. ಭಾರತ ತಂಡವು ಈ ಪಂದ್ಯವನ್ನು 31ರನ್​ಗಳಿಂದ ಸೋತಿತ್ತು. ರೋಹಿತ್ ಶರ್ಮಾ ಮತರ್ತು ವಿರಾಟ್​ ಕೊಹ್ಲಿ 100ರನ್​ಗಳ ಜೊತೆಯಾಟ ಆಡಿದ್ದರು. ಆದರೆ ಕೊನೆಯ ಓವರ್​ಗಳಲ್ಲಿ ರನ್​ ಬಾರದೇ ಇರೋದರಿಂದ ಪಂದ್ಯ ಸೋಲಬೇಕಾಯಿತು.

Comments are closed.