ಕರ್ನಾಟಕ

ನಾನು ಕೂಡ ಗ್ರಾಮವಾಸ್ತವ್ಯ ಮಾಡಲು ಯೋಚನೆ ಮಾಡಿದ್ದೇನೆ: ಹೆಚ್​.ಡಿ ರೇವಣ್ಣ

Pinterest LinkedIn Tumblr
H D Revanna ,

ಹಾಸನ: ನಾನು ಕೂಡ ಗ್ರಾಮವಾಸ್ತವ್ಯ ಮಾಡಲು ಯೋಚನೆ ಮಾಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಅವರು ಹೇಳಿದರು.

ಹಾಸನದಲ್ಲಿ ಮಂಗಳವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆಯುತ್ತೇನೆ. ಹಳ್ಳಿಗಳ ಪಟ್ಟಿ ತೆಗೆದುಕೊಂಡು ಅದರ ವಸ್ತು ಸ್ಥಿತಿ ನೋಡಿ ಅಂತಹ ಗ್ರಾಮಗಳಲ್ಲಿ ವಾಸ್ಯವ್ಯ ಮಾಡುತ್ತೇನೆ ಎಂದರು.

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ನಾನು ಇಲ್ಲಿ ರಾಜಕೀಯ ಮಾತನಾಡೊಲ್ಲ. ನಮ್ಮ ಜಿಲ್ಲೆಯ ಅಭಿವೃದ್ದಿ ಬಗ್ಗೆ ಮಾತನಾಡಿ ಎಂದು ಪತ್ರಕರ್ತರಿಗೆ ಹೇಳಿದ್ದಾರೆ.

ಇನ್ನು ರೈತರ ಸಾಲಮನ್ನಾ ಯೋಜನೆ ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯದಲ್ಲಿ ಹಾಸನದ ಅತೀ ಹೆಚ್ಚು ರೈತರಿಗೆ ಸಾಲಮನ್ನಾ ಆಗಿದೆ. ಮುಂದಿನ ತಿಂಗಳು 10 ತಾರೀಖಿನೊಳಗೆ ಬಾಕಿ ಹಣ ಪಾವತಿ ಆಗುತ್ತೆ ಎಂದು ಹೆಚ್​.ಡಿ ರೇವಣ್ಣ ಅವರು ತಿಳಿಸಿದ್ದಾರೆ.

ಸದ್ಯ ಗ್ರಾಮವಾಸ್ತವ್ಯದ ಪರಿಕಲ್ಪನೆ ಮೊದಲಿಗೆ 2006ರಲ್ಲಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಮಾಡಿದರು. ಗ್ರಾಮವಾಸ್ತವ್ಯ ಆಲೋಚನೆ ರಾಜ್ಯದಲ್ಲಿ ಬಹಳ ಮೆಚ್ಚುಗೆ ಕೂಡ ಗಳಿಸಿತ್ತು. ಈಗ ರೇವಣ್ಣ ಅವರು ಕುಮಾರಸ್ವಾಮಿ ಅವರ ಹಾದಿಯಲ್ಲಿ ಇದ್ದಾರೆ.

Comments are closed.